ADVERTISEMENT

ಅತ್ಯಾಚಾರ ಪ್ರಕರಣದಲ್ಲಿ ಇಬ್ಬರ ಬಂಧನ: ಯುವಕನ ವಶಕ್ಕೆ ಪಡೆದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 15:00 IST
Last Updated 28 ಫೆಬ್ರುವರಿ 2026, 15:00 IST
<div class="paragraphs"><p>ಬಂಧನ</p></div>

ಬಂಧನ

   

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯನ್ನು ಪಾರ್ಟಿಗೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಂಧಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಡಿಕ್ಸನ್ ಸ್ಯಾಂಡ್ರ, ಮಲ್ಲೇಶ್ವರದ ಎಚ್‌.ಡಿ.ನಿಖಿಲ್ ಬಂಧಿತರು. ಧಾರವಾಡದ ಗುತ್ತಿಗೆದಾರ ಅನಿರುದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತ ಸಹ ಪಾರ್ಟಿಯಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.

ADVERTISEMENT

ಫೆ.14 ರಂದು ರಾತ್ರಿ ಜಕ್ಕೂರಿನ ವಿಲ್ಲಾವೊಂದರಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಪಾರ್ಟಿ ಹೆಸರಿನಲ್ಲಿ ಯುವತಿಯರನ್ನು ಕರೆಸಿ, ದೌರ್ಜನ್ಯವೆಸಗಿರುವ ಅನುಮಾನವಿದೆ. ಜತೆಗೆ ಮಾದಕ ವಸ್ತು ನೀಡಿರುವ ಶಂಕೆಯಿದೆ. ಹಾಗಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ನೇಹಿತರಾದ ಡಿಕ್ಸನ್ ಹಾಗೂ ಕಾರು ಡೀಲರ್ ನಿಖಿಲ್ ತಡರಾತ್ರಿ ವಿಲ್ಲಾಗಳಲ್ಲಿ ಪಾರ್ಟಿಗಳನ್ನು ಆಯೋಜಿಸಿ, ಕಾಲೇಜು ಯುವತಿಯರನ್ನು ಆಹ್ವಾನಿಸುತ್ತಿದ್ದರು. ಪಾರ್ಟಿಗಳ ಆಯೋಜನೆಗಾಗಿಯೇ ವಿಲ್ಲಾಗಳನ್ನು ಬಾಡಿಗೆ ಪಡೆದುಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. 

ಪಾರ್ಟಿ ಮಾಡಿದ್ದ ಸ್ಥಳ ಮಹಜರು ಮಾಡಲಾಗಿದ್ದು, ಸ್ಥಳದಲ್ಲಿ ಫೋಟೊ ಶೂಟ್‌ಗೆ ಬಳಸುತ್ತಿದ್ದ ಉಪಕರಣಗಳು ಪತ್ತೆಯಾಗಿವೆ. ಅಲ್ಲದೇ ಈ ವಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ ಸಂತ್ರಸ್ತೆ ಆರೋಪಿಗಳ ಜತೆ ಪಾರ್ಟಿ ಮಾಡಿರುವ ವಿಡಿಯೊ ಸಿಕ್ಕಿದ್ದು, ಪಾರ್ಟಿಯಲ್ಲಿ ಐವರು ಯುವತಿಯರು, ಮೂವರು ಯುವಕರು ನೃತ್ಯ ಮಾಡುತ್ತಿರುವ ದೃಶ್ಯ ಇದೆ. 

‘ಆರೋಪಿಗಳು ಪಾರ್ಟಿಯಲ್ಲಿ ಮತ್ತು ಬರುವ ಮಾತ್ರೆ ನೀಡಿದರು. ಮಾತ್ರೆ ತಿಂದ ಬಳಿಕ ದೇಹದಲ್ಲಿ ಬೆವರು ಬಂದು ಕಣ್ಣು ಮಂಜಾಗಿತ್ತು’ ಎಂದು ‌ಸಂತ್ರಸ್ತೆಯು ತನ್ನ ದೂರಿನಲ್ಲಿ ತಿಳಿಸಿದ್ದರು. ಹಾಗಾಗಿ ಮಾದಕ ವಸ್ತು ಸೇವನೆ ಬಗ್ಗೆಯೂ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.