ADVERTISEMENT

ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 18:34 IST
Last Updated 2 ಫೆಬ್ರುವರಿ 2026, 18:34 IST
ಅಮರನಾರಾಯಣ
ಅಮರನಾರಾಯಣ   

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ ಮಾಡಿರುವುದನ್ನು ಅಖಿಲ ಭಾರತ ಶ್ರೀಗಂಧ ಬೆಳೆಗಾರರು ಹಾಗೂ ಮರ ಸಂಸ್ಕೃತಿ ಸಂಘಟನೆ (ಎಐಎಸ್‌ಜಿಟಿಎ) ಸ್ವಾಗತಿಸಿದೆ.

ಭಾರತದಲ್ಲಿ ಶ್ರೀಗಂಧ ಹಾಗೂ ವೃಕ್ಷ ಕೃಷಿಯ ಆರ್ಥಿಕ, ಪರಿಸರ ಹಾಗೂ ಜೀವನೋಪಾಯ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮ ಇದಾಗಿದೆ. ಸುಸ್ಥಿರ ಕೃಷಿಯೊಂದಿಗೆ ಶ್ರೀಗಂಧದ ಮರ ಬೆಳೆಯಲು ಹಾಗೂ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಸಂಘಟನೆ ಅಧ್ಯಕ್ಷ ಕೆ. ಅಮರನಾರಾಯಣ ತಿಳಿಸಿದ್ದಾರೆ.

ಶ್ರೀಗಂಧ ಕ್ಷೇತ್ರದಲ್ಲಿ ಇರುವ ನಿಯಂತ್ರಣ ಹಾಗೂ ಮಾರುಕಟ್ಟೆ ಸಂಬಂಧಿತ ಸವಾಲುಗಳನ್ನು ಸರಳೀಕರಿಸಿ ಪರಿಸರ ಸಂರಕ್ಷಣೆ, ಕಾರ್ಬನ್‌ ಸಂಗ್ರಹಣೆ, ರೈತರ ದೀರ್ಘಕಾಲೀನ ಭದ್ರತೆಗೂ ಕೊಡುಗೆ ನೀಡಲಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಶ್ರೀಗಂಧ ನೀತಿಯನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ನಾವೂ ಸಹಕಾರ ನೀಡುತ್ತೇವೆ. ಭಾರತವು ಶ್ರೀಗಂಧ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ಸಾಧಿಸುವಂತೆ ನೀತಿ ನಿರ್ಧಾರಗಳನ್ನು ನಿರಂತರ ಸಂವಾದದ ಮೂಲಕ ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.