ADVERTISEMENT

ವಿಶ್ವವಿದ್ಯಾಲಯ ಕಾಯ್ದೆ: ವಿಶ್ರಾಂತ ಕುಲಪತಿಗಳ ವೇದಿಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:07 IST
Last Updated 14 ಮೇ 2022, 20:07 IST
ಡಾ. ಕೆ.ಎಸ್‌.ರಂಗಪ್ಪ
ಡಾ. ಕೆ.ಎಸ್‌.ರಂಗಪ್ಪ   

ಬೆಂಗಳೂರು: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–2000ಕ್ಕೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಕರ್ನಾಟಕ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಸ್ವಾಗತಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸುಗಳಿಗೆ ಅನುಗುಣವಾಗಿ ರಾಜ್ಯದ ವಿ.ವಿ.ಗಳ ರಚನೆ ಹಾಗೂ ಕಾರ್ಯನಿವಹಣೆಗಳಲ್ಲಿ ಬದಲಾವಣೆಗಳನ್ನು ತರಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಎಫ್‌ವಿಸಿಕೆ ಅಧ್ಯಕ್ಷ ಡಾ.ಕೆ.ಎಸ್‌. ರಂಗಪ್ಪ ತಿಳಿಸಿದ್ದಾರೆ.

ಖಾಲಿ ಉಳಿದ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ADVERTISEMENT

ಹೆಚ್ಚಿನ ಅನುದಾನ ಒದಗಿಸುವ ಮೂಲಕ ಹಳೆಯ ಹಾಗೂ ಹೊಸ ವಿ.ವಿ.ಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ಆಂತರಿಕ ಸಂಪನ್ಮೂಲಗಳನ್ನು ವೃದ್ಧಿಸಲು ಪ್ರೋತ್ಸಾಹ ನೀಡಬೇಕು ಎಂದರು. ಸಿಂಡಿಕೇಟ್ ಹೆಸರನ್ನು ‘ಬೋರ್ಡ್ ಆಫ್ ಗವರ್ನ್‌ನ್ಸ್‌’ ಎಂದು ಬದಲಾಯಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಐಐಎಂ ಮಾದರಿಯನ್ನು ಅನುಸರಿಸುವುದು ಉತ್ತಮ. ನೂರಾರು ಸಂಯೋಜಿತ ಕಾಲೇಜುಗಳಿರುವ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ, ಅಂಗಸಂಸ್ಥೆಗಳು, ಪರೀಕ್ಷೆಗಳು, ಕಾನೂನುಕಟ್ಟಳೆಗಳು ಹಾಗೂ ವಿದ್ಯಾರ್ಥಿ ಕಲ್ಯಾಣ ಚಟುವಟಿಕೆಗಳ ಉಸ್ತುವಾರಿಗೆ ಸಹಕುಲಾಧಿಪತಿ ಹುದ್ದೆ ಸೃಷ್ಟಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

‘ವಿ.ವಿ.ಯ ವಿವಿಧ ಚಟುವಟಿಕೆ ಬಗ್ಗೆ ಗಮನ ನೀಡಲು ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆ ಸೃಷ್ಟಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.