ADVERTISEMENT

ವ್ಯಕ್ತಿತ್ವ ಬದಲಿಸಿದ ವಚನ ಸಾಹಿತ್ಯ: ಮೀನಾಕ್ಷಿ ಬಾಳಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 21:02 IST
Last Updated 17 ಮಾರ್ಚ್ 2025, 21:02 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಅವರನ್ನು ಕೆ.ಎಂ.ಗಾಯತ್ರಿ ಸನ್ಮಾನಿಸಿದರು. ಬನಶಂಕರಿ ಅಂಗಡಿ ಇದ್ದಾರೆ. 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಅವರನ್ನು ಕೆ.ಎಂ.ಗಾಯತ್ರಿ ಸನ್ಮಾನಿಸಿದರು. ಬನಶಂಕರಿ ಅಂಗಡಿ ಇದ್ದಾರೆ.    

ಬೆಂಗಳೂರು: ‘ತತ್ವಪದಗಳು ಮತ್ತು ವಚನ ಸಾಹಿತ್ಯ ನನ್ನ ವ್ಯಕ್ತಿತ್ವದ ಮಜಲನ್ನು ಬದಲಿಸುವುದರ ಜೊತೆಗೆ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಿದವು’ ಎಂದು ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಸಮಾರಂಭದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರ ತತ್ವಪದಗಳು, ನಿಂಬರಗಿ ಮಹಾರಾಜರು ಹೀಗೆ ತತ್ವಪದಕಾರರ ಹಾಡುಗಳನ್ನು ಕೇಳುತ್ತಿದ್ದೆ. ಪುಸ್ತಕ ರೂಪದಲ್ಲಿ ‍ತರಲು ಪ್ರಯತ್ನಿಸಿದೆ. ತತ್ವಪದಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರ.

ADVERTISEMENT

‘ಹಲವು ಅಡೆತಡೆಗಳ ನಡುವೆ ಶಿಕ್ಷಣ ಪಡೆದೆ. ಉನ್ನತ ಶಿಕ್ಷಣ ಪಡೆದ ಬಳಿಕ ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಚಿಂತಿಸಿದ್ದು ಉಂಟು. 

‘ಕಲ್ಯಾಣ ಕರ್ನಾಟಕ ಕೋಮುಸೌಹಾರ್ದಕ್ಕೆ ಹೆಸರಾದ ನೆಲ. ಆದರೆ, ಕಲ್ಯಾಣ ಕರ್ನಾಟಕಕ್ಕೆ ಅವಕಾಶಗಳು ವಂಚನೆಯಾಗುತ್ತಿವೆ. ಹೋರಾಟದ ಮೂಲಕವೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯಿಂದ ಈ ಭಾಗದ ಜನರ ವಲಸೆ ಹೆಚ್ಚಾಗಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ,  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕಲಾವಿದ ಅಪ್ಪಗೆರೆ ತಿಮ್ಮರಾಜು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.