ADVERTISEMENT

‘ಅಮರ ಮಧುರ ಪ್ರೇಮ’ ಸ್ಪರ್ಧೆ: ಪೂರ್ಣಿಮಾಗೆ ಬಂಪರ್ ಬಹುಮಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 22:00 IST
Last Updated 19 ಫೆಬ್ರುವರಿ 2021, 22:00 IST
ಪೂರ್ಣಿಮಾ
ಪೂರ್ಣಿಮಾ   

ಬೆಂಗಳೂರು: ‘ಪ್ರೇಮಿಗಳ ದಿನಾಚರಣೆ’ಯ ಅಂಗವಾಗಿ ‘ಪ್ರಜಾವಾಣಿ‘ ಏರ್ಪಡಿಸಿದ್ದ ‘ಅಮರ ಮಧುರ ಪ್ರೇಮ’ ಹಾಡಿನ ಸಾಲು ಗುರುತಿಸುವ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿಯ ನಿವಾಸಿ ಪೂರ್ಣಿಮಾ ಅವರು ಬಂಪರ್ ಬಹುಮಾನ ವಿಜೇತರಾಗಿದ್ದಾರೆ.

ಭಾಗವಹಿಸಿ, ಸರಿಯುತ್ತರ ಕಳುಹಿಸಿದ್ದ ಸ್ಪರ್ಧಿಗಳಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು. ಬಂಪರ್‌ ಬಹುಮಾನವಾಗಿ ₹ 15 ಸಾವಿರ ಮೌಲ್ಯದ ವಾಚ್ ನೀಡಲಾಗುವುದು. ಉಳಿದಂತೆ, ಸ್ಪರ್ಧೆಯ ಮೂರು ದಿನ 10 ಮಂದಿ ಅದೃಷ್ಟಶಾಲಿ ವಿಜೇತರಿಗೆ ತಲಾ ₹ 500 ಮೌಲ್ಯದ ಗಿಫ್ಟ್ ಕೂಪನ್ ಅನ್ನು ನೀಡಲಾಗುತ್ತದೆ.

‌ಫೆಬ್ರುವರಿ 12 ರಿಂದ 14ರವರೆವಿಗೆ ನಡೆದಿದ್ದ ಈ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಗೀತೆಯೊಂದರ ಸಾಲನ್ನು ನೀಡಿ, ಅದರ ಮುಂದಿನ ಸಾಲು ಗುರುತಿಸುವಂತೆ ಸ್ಪರ್ಧಿಗಳಿಗೆ ಕೇಳಲಾಗಿತ್ತು. ಮೂರು ಆಯ್ಕೆಯನ್ನೂ ನೀಡಿ, ವಾಟ್ಸ್ಆ್ಯಪ್ ಮೂಲಕ ಸರಿಯುತ್ತರ ತಿಳಿಸಲು ಕೋರಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.