ವಸುಂಧರಾ ಭೂಪತಿ
ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘದ 2025–26ನೇ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಡಾ. ವಸುಂಧರಾ ಭೂಪತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಜಿ.ಎನ್. ಮೋಹನ್ ಮತ್ತು ಯು. ಪ್ರೇಮಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ರವಿಕುಮಾರ್, ಜಂಟಿ ಕಾರ್ಯದರ್ಶಿಯಾಗಿ ನಿಂಗರಾಜ ಚಿತ್ತಣ್ಣನವರ, ಖಜಾಂಚಿಯಾಗಿ ರಾಜೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹೇಮಾ ಪಟ್ಟಣಶೆಟ್ಟಿ, ಆರ್. ಪೂರ್ಣಿಮಾ, ವಸುಧೇಂದ್ರ, ಬಿ. ಎಸ್. ವಿದ್ಯಾರಣ್ಯ, ಕೆ. ರಾಜಕುಮಾರ್, ರವೀಂದ್ರನಾಥ ಸಿರವರ, ವಿಶಾಲಕ್ಷಿ ಶರ್ಮ ಆಯ್ಕೆಯಾಗಿದ್ದಾರೆ ಸಂಘದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.