ಸ್ವಾಮಿ ವಿವೇಕಾನಂದ
ಚಿತ್ರಕೃಪೆ : ಎಕ್ಸ್
ಬೆಂಗಳೂರು: ವೇದಾಂತ ಭಾರತಿ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಜ.29ರಿಂದ ನಾಲ್ಕು ದಿನ ರಾಷ್ಟ್ರಮಟ್ಟದ ವಿವೇಕ ದೀಪ್ತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಭಾರತದ ಜ್ಞಾನ ಪರಂಪರೆಯ ಆಧಾರದ ಮೇಲೆ ಅನುಭವಾತ್ಮಕ ಕಲಿಕೆ ಹಾಗೂ ಸಮೂಹ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲನೇ ದಿನ ಆದಿ ಶಂಕರಾಚಾರ್ಯರು ರಚಿಸಿದ
ಶ್ರೀ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವೋಪದೇಶಗಳನ್ನು ಆಧರಿಸಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ದಕ್ಷಿಣಾಸ್ಯ ದರ್ಶಿನಿ ಪ್ರದರ್ಶನ ಹಾಗೂ ಮೂರನೇ ದಿನ ದಕ್ಷಿಣಾಮೂರ್ತಿ ಅಷ್ಟಕ ಸ್ತೋತ್ರ ಮಹಾಸಮರ್ಪಣೆ ಪ್ರಮುಖ ಆಕರ್ಷಣೆಗಳಾಗಿವೆ.
ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಭಾರತಿ ತೀರ್ಥ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಯಡತೊರೆ ಮಠದ ಶಂಕರ ಭಾರತಿ ಸ್ವಾಮೀಜಿ ಹಾಗೂ ಅವರ ಉತ್ತರಾಧಿಕಾರಿ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಅವರು ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.