ADVERTISEMENT

ಬೆಂಗಳೂರು: ನವೆಂಬರ್‌ನಲ್ಲಿ ವೀರಲೋಕ ಪುಸ್ತಕ ಸಂತೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 17:23 IST
Last Updated 8 ಸೆಪ್ಟೆಂಬರ್ 2025, 17:23 IST
<div class="paragraphs"><p>ವೀರಲೋಕ</p></div>

ವೀರಲೋಕ

   

ಬೆಂಗಳೂರು: ನವೆಂಬರ್‌ 14ರಿಂದ 16ರವರೆಗೆ ವೀರಲೋಕ ಪುಸ್ತಕ ಸಂತೆ -3 ಜಯನಗರದ ಶಾಲಿನಿ ಆಟದ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ನಡೆಯಲಿದೆ.

ಕನ್ನಡ ಭಾಷೆಯ ಪುಸ್ತಕಗಳಿಗಷ್ಟೇ ಸೀಮಿತವಾಗಿರಲಿದ್ದು, ಪುಸ್ತಕ ಸಂತೆಗೆ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲೆಯಾಳ, ರಾಜಸ್ಥಾನಿ, ಪಂಜಾಬಿ ಮತ್ತು ಬಂಗಾಲಿ ಭಾಷೆಯ ಲೇಖಕರೂ ಮತ್ತು ಪತ್ರಕರ್ತರನ್ನು ಪ್ರತಿನಿಧಿಗಳಾಗಿ ಆಹ್ವಾನಿಸಲಾಗುವುದು. ನೂರು ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸುವುದರ ಜತೆಗೆ 20ಕ್ಕೂ ಹೆಚ್ಚು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

ADVERTISEMENT

ವಿಚಾರಗೋಷ್ಠಿಗಳು, ನಿತ್ಯ ಸಂಜೆ ಸಂಗೀತ ಮತ್ತು ನಾಟಕ, ಪುಸ್ತಕ ಸಂತೆಯ ಜೊತೆಗೆ ಆಹಾರ, ಮಕ್ಕಳ ಮತ್ತು ಮನರಂಜನಾ ಸಂತೆಯೂ ಇರುತ್ತದೆ. ಪುಸ್ತಕ ಮಳಿಗೆಗಳ ನೋಂದಣಿಗೆ ಅಕ್ಟೋಬರ್‌ 30 ಕೊನೆ ದಿನ. ಮಾಹಿತಿಗೆ 7022122121  ಸಂಪರ್ಕಿಸಬಹುದು ಅಥವಾ ವೆಬ್‌ಸೈಟ್ ವೀರಲೋಕಬುಕ್ಸ್.ಕಾಮ್‌ಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.