ADVERTISEMENT

ಸ್ಥಿರತೆ ಕಾಯ್ದುಕೊಂಡ ತರಕಾರಿ, ಸೊಪ್ಪು ದರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:05 IST
Last Updated 20 ಫೆಬ್ರುವರಿ 2019, 20:05 IST
   

ಬೆಂಗಳೂರು: ಬೇಸಿಗೆಯ ಆರಂಭಕ್ಕೂ ಮುನ್ನ ಕೆಲವು ತರಕಾರಿ, ಸೊಪ್ಪು ಹಾಗೂ ಹಣ್ಣುಗಳು ದರದಲ್ಲಿ ಸ್ಥಿರತೆ ಕಾಯ್ದುಕೊಂಡಿವೆ.

ಬುಧವಾರ ಕೆ.ಆರ್‌.ಮಾರುಕಟ್ಟೆಯಲ್ಲಿ ಕ್ಯಾರೆಟ್‌, ಬದನೆಕಾಯಿ, ಸೋರೆಕಾಯಿ ₹10 ಹಾಗೂ ಪುದೀನಾ, ಕೊತ್ತಂಬರಿ ಸೊಪ್ಪು ₹5ಕ್ಕೆ ಮಾರಲಾಯಿತು. ಏಲಕ್ಕಿ ಬಾಳೆಹಣ್ಣು ₹40ಕ್ಕೆ ಮಾರಾಟವಾದರೆ, ಹಾಪ್‌ಕಾಮ್ಸ್‌ನಲ್ಲಿ ₹47 ಹಾಗೂ ಪಚ್ಚೆಬಾಳೆ ₹25ಕ್ಕೆ ಮಾರಾಟವಾಯಿತು.

ಕೆಲವು ತರಕಾರಿ ಹಣ್ಣುಗಳ ದರ ಇಳಿಕೆಯಾಗಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಕೊಂಡುಕೊಳ್ಳುವವರಿಲ್ಲ ಎಂದು ವ್ಯಾಪಾರಿಗಳು ಹೇಳಿದರು.

ADVERTISEMENT

‘ಸದ್ಯ, ಸೊಪ್ಪುಗಳ ಪೂರೈಕೆ ಸಾಕಷ್ಟಿದೆ. ಹಾಗಾಗಿ, ದರದಲ್ಲಿ ಅಂತಹದ್ದೇನೂ ಏರಿಕೆಯಾಗಿಲ್ಲ. ಆದರೆ, ಬೇಸಿಗೆ ಜೋರಾಗಿ ಆರಂಭವಾಗುತ್ತಿದ್ದಂತೆ ದರಗಳಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಲಿದೆ’ ಎಂದರು ಸೊಪ್ಪಿನ ವ್ಯಾಪಾರಿ ಸತ್ಯಾ.

‘ಸೀಜನ್‌ ವೇಳೆ ಹೂವಿನ ದರ ಮುಗಿಲು ಮುಟ್ಟಿರುತ್ತದೆ. ಆದರೆ, ಸದ್ಯ ಹೂವಿನ ಬೆಲೆ ಕುಸಿತ ಕಂಡಿದ್ದು, ಕೆ.ಜಿ ಗುಲಾಬಿ ಹೂ ₹60ಕ್ಕೆ ಮಾರಾಟವಾಗುತ್ತಿದೆ. ₹700 ರಿಂದ ₹800 ದರವಿದ್ದಮಲ್ಲಿಗೆ ₹200ರಿಂದ ₹250ಕ್ಕೆ ಇಳಿಮುಖವಾಗಿದೆ’ ಎಂದು ಹೂವಿನ ವ್ಯಾಪಾರಿ ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.