ADVERTISEMENT

ಬೆಂಗಳೂರು | ಉರುಳಿಬಿದ್ದ ಮರ: ವಾಹನಗಳು ಜಖಂ, ಸವಾರ ಗಾಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 16:18 IST
Last Updated 14 ಜುಲೈ 2023, 16:18 IST
ಉರುಳಿಬಿದ್ದಿರುವ ಮರದಡಿ ಸಿಲುಕಿ ಜಖಂಗೊಂಡಿರುವ ಕಾರುಗಳು
ಉರುಳಿಬಿದ್ದಿರುವ ಮರದಡಿ ಸಿಲುಕಿ ಜಖಂಗೊಂಡಿರುವ ಕಾರುಗಳು   

ಬೆಂಗಳೂರು: ಹೈಗ್ರೌಂಡ್ಸ್ ಠಾಣೆ ಎದುರಿನ ರಸ್ತೆಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದಿದ್ದು, ಅದರಡಿ ಸಿಲುಕಿ ವಾಹನಗಳು ಜಖಂಗೊಂಡಿವೆ. ಬೈಕ್ ಸವಾರ ರಾಜಶೇಖರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕನ್ನಿಂಗ್‌ಹ್ಯಾಮ್ ರಸ್ತೆಗೆ ಹೊಂದಿಕೊಂಡಿರುವ ಚಂದ್ರಿಕಾ ಹೋಟೆಲ್ ವೃತ್ತದಲ್ಲಿರುವ ಮರ, ಶುಕ್ರವಾರ ರಾತ್ರಿ ಏಕಾಏಕಿ ಉರುಳಿಬಿದ್ದಿದೆ. ರಸ್ತೆಯಲ್ಲಿ ಹೊರಟಿದ್ದ ಮೂರು ಕಾರುಗಳು ಹಾಗೂ ಬೈಕ್ ಮೇಲೆಯೇ ಮರದ ಟೊಂಗೆಗಳು ಬಿದ್ದಿದ್ದವು’ ಎಂದು ಪೊಲೀಸರು ಹೇಳಿದರು.

‘ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದ ಸಂದರ್ಭದಲ್ಲಿ ಮರ ಉರುಳಿ ಬಿದ್ದಿದೆ. ಟೊಂಗೆ ಅಡಿ ಸಿಲುಕಿದ್ದ ಕಾರಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ. ಬೈಕ್ ಸವಾರನಿಗೆ ಮಾತ್ರ ಗಾಯಗಳಾಗಿವೆ’ ಎಂದು ತಿಳಿಸಿದರು.

ADVERTISEMENT

‘ಇಡೀ ರಸ್ತೆಯಲ್ಲಿ ಮರದ ಟೊಂಗೆಗಳು ಬಿದ್ದಿದ್ದವು. ಇದರಿಂದಾಗಿ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿ, ದಟ್ಟಣೆ ಉಂಟಾಯಿತು. ಪರ್ಯಾಯ ರಸ್ತೆಗಳ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.