ADVERTISEMENT

ವಿಬ್‌ಗೊಯರ್‌ ಶಿಕ್ಷಣ ಸಂಸ್ಥೆ: ವಾರ್ಷಿಕ ಶುಲ್ಕ ಹೆಚ್ಚಳ ರದ್ದು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 16:07 IST
Last Updated 8 ನವೆಂಬರ್ 2020, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಪಿಡುಗು ತಂದೊಡ್ಡಿರುವ ಆರ್ಥಿಕ ಸಂಕಷ್ಟದ ಕಾರಣಕ್ಕೆ ವಿಬ್‌ಗೊಯರ್‌ ಶಾಲಾ ಸಮೂಹವು ಮುಂದಿನ ಶೈಕ್ಷಣಿಕ ವರ್ಷದಲ್ಲಿ (2021–22) ವಾರ್ಷಿಕ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಟ್ಯೂಷನ್‌ ಫೀ, ಪಠ್ಯೇತರ ಚಟುವಟಿಕೆ, ವಿ–ಎಂಬಾರ್ಕ್‌ ಕ್ಲಬ್ಸ್‌, ಕಿಡ್ಸ್‌ ಕ್ಲಬ್‌, ಕ್ಯಾಂಟೀನ್‌ ಮತ್ತು ವಾಹನ ಸೇವಾ ಶುಲ್ಕ ಏರಿಕೆ ಮಾಡದಿರಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ.

‘ಪಿಡುಗಿನಿಂದಾಗಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯ ಕಾರಣಕ್ಕೆ ಪಾಲಕರಿಂದ ಸಂಗ್ರಹಿಸಿದ ಅಭಿಪ್ರಾಯ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಶುಲ್ಕ ಹೆಚ್ಚಳ ಕೈಬಿಟ್ಟಿರುವ ನಿರ್ಧಾರವು ಎಲ್ಲ ತರಗತಿಗಳ ಹಾಲಿ ವಿದ್ಯಾರ್ಥಿಗಳಿಗೆ ಮತ್ತು ಹೊಸದಾಗಿ ಸೇರ್ಪಡೆಯಾಗಲಿರುವ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ‘ ಎಂದು ವಿಬ್‌ಗೊಯರ್‌ ಗ್ರೂಪ್‌ ಆಫ್‌ ಸ್ಕೂಲ್‌ನ ಸಿಎಂಒ ಪೇಶ್ವ ಆಚಾರ್ಯ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.