ADVERTISEMENT

ವಿಡಿಯೊ ಲೈಕ್‌ನಿಂದ ಗಳಿಕೆ ಆಮಿಷ: ₹ 3.48 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 20:17 IST
Last Updated 7 ಮಾರ್ಚ್ 2023, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿಡಿಯೊ ಲೈಕ್‌ ಮಾಡಿ ಹಣ ಗಳಿಸಬಹುದು’ ಎಂಬುದಾಗಿ ಆಮಿಷವೊಡ್ಡಿ ನಗರದ ನಿವಾಸಿಯೊಬ್ಬರಿಂದ ₹ 3.48 ಲಕ್ಷ ಪಡೆದು ವಂಚಿಸಲಾಗಿದೆ.

ಕುಮಾರಸ್ವಾಮಿ ಲೇಔಟ್‌ ನಿವಾಸಿಯೊಬ್ಬರು ವಂಚನೆ ಸಂಬಂಧ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ‘ಪಾರ್ಟ್‌ಟೈಮ್ ಕೆಲಸಕ್ಕಾಗಿ ದೂರುದಾರರು ಹುಡುಕಾಟ ನಡೆಸುತ್ತಿದ್ದರು. ಅವರ ಮೊಬೈಲ್‌ಗೆ ವಾಟ್ಸ್‌
ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ವಿಡಿಯೊ ಲಿಂಕ್ ತೆರೆದು ಲೈಕ್ ಮಾಡಿ. ಪ್ರತಿ ವಿಡಿಯೊಗೆ ₹ 150 ನೀಡುತ್ತೇವೆ’ ಎಂದಿದ್ದರು. ಲಿಂಕ್ ತೆರೆದಿದ್ದ ದೂರುದಾರ, ವಿಡಿಯೊ ಲೈಕ್ ಮಾಡಿದ್ದರು. ₹ 150 ಸಹ ಬಂದಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

ಇದಲ್ಲದೇ ಮತ್ತಷ್ಟು ಆಮಿಷಗಳನ್ನು ಅವರು ಒಡ್ಡಿದ್ದರು. ದೂರುದಾರ, ಹಂತ ಹಂತವಾಗಿ ₹ 3.48 ಲಕ್ಷ ಪಾವತಿಸಿದ್ದರು. ಇದಾದ ನಂತರ, ಆರೋಪಿಗಳೂ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.