ನೆಲಮಂಗಲ: ಅರಿಶಿನಕುಂಟೆಯ ವಿಶ್ವಶಾಂತಿ ಆಶ್ರಮದಲ್ಲಿ ಏಕಶಿಲಾ ವಿಶ್ವರೂಪ ವಿಜಯ ವಿಠ್ಠಲ ದೇವರಿಗೆ 37ನೇ ಪ್ರತಿಷ್ಠಾ ವರ್ಧಂತಿ ಮತ್ತು ಸಂಸ್ಥಾಪಕ ಸಂತ ಭದ್ರಗಿರಿ ಕೇಶವದಾಸರ 91ನೇ ಜನ್ಮದಿನೋತ್ಸವದ ಪ್ರಯುಕ್ತ ಶನಿವಾರ ಮತ್ತು ಭಾನುವಾರ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಎರಡೂ ದಿನ ಪಂಚಾಮೃತ ಅಭಿಷೇಕ, ದಾಸ ಕೀರ್ತನ ಮಹಾಮಂಡಳಿ ಮತ್ತು ವಿವಿಧ ಮಂಡಳಿಗಳಿಂದ ನಿರಂತರ ವಿಷ್ಣುಸಹಸ್ರನಾಮ, ಭಜನೆ ಮತ್ತು ಕೀರ್ತನೆಗಳೊಂದಿಗೆ ಜಾಗರಣೆ ನಡೆಯಿತು. ಭಕ್ತರಿಗೆ ಅಭಿಷೇಕ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.