ADVERTISEMENT

ತಮ್ಮನ್ನು ನೋಡಿ ಜನರು ಹೆದರಬೇಕೆಂದು ಕಾರಿನ ಮೇಲೆ ಕಲ್ಲು: 7 ಯುವಕರ ಬಂಧನ

ಜೈಲಿಗೆ ಹೋಗಿ ಬಂದರೆ ಹೆಸರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:01 IST
Last Updated 8 ನವೆಂಬರ್ 2019, 20:01 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ತಮ್ಮನ್ನು ನೋಡಿ ಜನರು ಹೆದರಬೇಕೆಂಬ ಕಾರಣಕ್ಕೆ 21 ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪದಡಿ ಏಳು ಯುವಕರನ್ನು ಪಶ್ಚಿಮ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪಂಚಶೀಲನಗರದ ಯಶವಂತ್ ಅಲಿಯಾಸ್ ಪೆಂಗಾ, ದರ್ಶನ್ ಅಲಿಯಾಸ್ ಆಶ್ರಯ್, ನಿತಿನ್ ಅಲಿಯಾಸ್ ಬೊಂಡಾ, ಕನಕನಗರದ ಕಿರಣರೆಡ್ಡಿ, ಮುತ್ತು, ಚರಣರಾಜ್ ಹಾಗೂ ಬಾಲಾಜಿ ಬಂಧಿತರು.

‘ಸುಲಿಗೆ, ಕಳ್ಳತನ ಸೇರಿದಂತೆ ಹಲವು ಅಪರಾಧ ಕೃತ್ಯ ಎಸಗಲು ಆರೋಪಿಗಳು ಸಂಚು ರೂಪಿಸಿದ್ದರು. ಅದಕ್ಕೂ ಮುನ್ನ ವಿಜಯನಗರ ಹಾಗೂ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಜನರಲ್ಲಿ ಭಯ ಹುಟ್ಟಿಸಬೇಕು ಎಂದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

’ನಿವಾಸಿಗಳು ಮನೆ ಮುಂದೆ ಕಾರುಗಳನ್ನು ನಿಲ್ಲಿಸಿದ್ದರು. ಮದ್ಯ ಸೇವಿಸಿ ಬುಧವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ್ದ ಆರೋಪಿಗಳು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಒಡೆದು ಹಾಕಿದ್ದರು. ಈ ಸಂಬಂಧ ಕಾರಿನ ಮಾಲೀಕರು ದೂರು ನೀಡಿದ್ದರು. ಆರೋಪಿಗಳ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ತಿಳಿಸಿದರು.

ಜೈಲಿಗೆ ಹೋಗಿ ಬಂದರೆ ಹೆಸರು: ‘ಯಾವುದೇ ಕೆಲಸಕ್ಕೆ ಹೋಗದ ಆರೋಪಿಗಳನ್ನು ಅವರ ಮನೆಯವರು ಹೊರಗೆ ಹಾಕಿದ್ದಾರೆ. ಅಂದಿನಿಂದಲೇ ಆರೋಪಿಗಳು ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಒಮ್ಮೆ ಜೈಲಿಗೆ ಹೋಗಿ ಬಂದರೆ ಹೆಸರು ಆಗುತ್ತದೆ. ತಮ್ಮನ್ನು ನೋಡಿ ಜನರು ಹೆದರುತ್ತಾರೆಂದು ಆರೋಪಿಗಳು ತಿಳಿದಿದ್ದರು. ಅದೇ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.