ADVERTISEMENT

ಬೆಂಗಳೂರು: ವಾರಂಟ್ ಜಾರಿ ಮಾಡುವ ಪೊಲೀಸ್‌ಗೆ ಕೊರೊನಾ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:57 IST
Last Updated 9 ಆಗಸ್ಟ್ 2020, 16:57 IST

ಬೆಂಗಳೂರು: ಅಪರಾಧ ಹಾಗೂ ಸಂಚಾರ ಪ್ರಕರಣಗಳಲ್ಲಿ ನ್ಯಾಯಾಲಯದ ವಾರಂಟ್‌ಗಳನ್ನು ಮನೆ ಮನೆಗೆ ತೆರಳಿ ನೀಡುತ್ತಿದ್ದ ವಿಜಯನಗರ ಸಂಚಾರ ಠಾಣೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.

55 ವರ್ಷದ ಸಿಬ್ಬಂದಿಇತ್ತೀಚೆಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಅದರ ವರದಿ ಪಾಸಿಟಿವ್ ಬಂದಿದೆ. ಅವರು ಹಲವು ದಿನಗಳಿಂದ ವಾರಂಟ್ ಜಾರಿ ಮಾಡಲು ಮನೆ ಮನೆಗೆ ಹೋಗಿದ್ದರು. ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT