ADVERTISEMENT

ಪಠ್ಯದಲ್ಲಿ ಧರ್ಮಗ್ರಂಥ ಅಳವಡಿಕೆಗೆ ವಿನಯ್ ಗುರೂಜಿ ಒತ್ತಾಯ

ಗೋಹತ್ಯೆ ನಿಷೇಧ ಕಾಯ್ದೆ ಬೆಂಬಲಿಸಿ ಗೋವುಗಳಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 5:22 IST
Last Updated 11 ಡಿಸೆಂಬರ್ 2020, 5:22 IST
ಗೋವುಗಳಿಗೆ ವಿನಯ್‌ ಗುರೂಜಿ ಪೂಜೆ ಸಲ್ಲಿಸಿದರು. ಟಿ.ಎ.ಶರವಣ, ಬೇಳೂರು ರಾಘವೇಂದ್ರಶೆಟ್ಟಿ, ಟ್ರಸ್ಟ್‌ನ ಶಿವಕುಮಾರ್ ಹಾಗೂ ಅರುಣ್ ಇದ್ದರು
ಗೋವುಗಳಿಗೆ ವಿನಯ್‌ ಗುರೂಜಿ ಪೂಜೆ ಸಲ್ಲಿಸಿದರು. ಟಿ.ಎ.ಶರವಣ, ಬೇಳೂರು ರಾಘವೇಂದ್ರಶೆಟ್ಟಿ, ಟ್ರಸ್ಟ್‌ನ ಶಿವಕುಮಾರ್ ಹಾಗೂ ಅರುಣ್ ಇದ್ದರು   

ಬೆಂಗಳೂರು: ‘ಕೋಮು ಗಲಭೆಗಳನ್ನು ನಿಯಂತ್ರಿಸಲು ಮತ್ತು ಜನರಲ್ಲಿ ಧರ್ಮಗ್ರಂಥಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಪಠ್ಯದಲ್ಲಿ ಎಲ್ಲ ಧರ್ಮಗ್ರಂಥಗಳ ಕುರಿತ ಪಾಠಗಳನ್ನು ಅಳವಡಿಸಬೇಕು’ ಎಂದು ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕ ವಿನಯ್ ಗುರೂಜಿ ಒತ್ತಾಯಿಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿರುವ ಕಾರಣ ಗುರುವಾರ ಗೋವಿನ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಠ್ಯದಲ್ಲಿ ಧರ್ಮಗ್ರಂಥದ ಸಾರ ಅಳವಡಿಸುವುದರಿಂದ ಧರ್ಮದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ನಿವಾರಣೆಯಾಗಲಿವೆ. ಸನಾತನ ಭಾರತದ ಸಂಸ್ಕಾರ ಮುಂದಿನ ಪೀಳಿಗೆಗೆ ರವಾನೆಯಾಗಲಿದೆ’ ಎಂದರು.

ADVERTISEMENT

ಜೆಡಿಎಸ್ ಮುಖಂಡ ಟಿ.ಎ. ಶರವಣ ಮಾತನಾಡಿ, ‘ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಬೇಕು ಮತ್ತು ಕಾಯ್ದೆ ಕುರಿತ ಗೊಂದಲಗಳನ್ನು ಸರ್ಕಾರ ನಿವಾರಿಸಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರಶೆಟ್ಟಿ ಮಾತನಾಡಿ, ‘ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಸದ್ಯದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.