ADVERTISEMENT

‘ಪರಿಶುದ್ಧ ಜೀವನದಿಂದ ಗುರುವಿಗೆ ಗೌರವ’

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:02 IST
Last Updated 24 ಜುಲೈ 2021, 19:02 IST
ಬಿಜಿಎಸ್ ಸಮೂಹ ಸಂಸ್ಥೆಯ ಪ್ರಕಾಶನಾಥ ಸ್ವಾಮೀಜಿ ಬಾಲಗಂಗಾಧರನಾಥರ ಮೂರ್ತಿಗೆ ಆರತಿ ಬೆಳಗುವ ಮೂಲಕ ಗುರುವಂದನೆ ಸಲ್ಲಿಸಿದರು. ವಿನಯ್ ಗುರೂಜಿ ಇದ್ದಾರೆ
ಬಿಜಿಎಸ್ ಸಮೂಹ ಸಂಸ್ಥೆಯ ಪ್ರಕಾಶನಾಥ ಸ್ವಾಮೀಜಿ ಬಾಲಗಂಗಾಧರನಾಥರ ಮೂರ್ತಿಗೆ ಆರತಿ ಬೆಳಗುವ ಮೂಲಕ ಗುರುವಂದನೆ ಸಲ್ಲಿಸಿದರು. ವಿನಯ್ ಗುರೂಜಿ ಇದ್ದಾರೆ   

ಕೆಂಗೇರಿ:‘ಪ್ರತಿ ವಿಚಾರದಲ್ಲೂ ಸಕಾರಾತ್ಮಕ ಅಂಶಗಳನ್ನು ಹೆಕ್ಕಿ ತೆಗೆದು, ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುವವನೇ ಗುರು’ ಎಂದು ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

ಉತ್ತರಹಳ್ಳಿ ರಸ್ತೆಯ ಬಿಜಿಎಸ್ ಕಾಲೇಜಿನಲ್ಲಿ ಶನಿವಾರ ನಡೆದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವವೇ ಒಂದು ಪಾಠಶಾಲೆ. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಲಿಸುತ್ತಾರೆ. ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಶುದ್ಧ ಜೀವನದತ್ತ ಹೆಜ್ಜೆ ಇಡಬೇಕು. ಆ ಮೂಲಕ ಗುರುಗಳನ್ನು ಗೌರವಿಸಬೇಕು’ ಎಂದರು.

ADVERTISEMENT

ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ,‘ಪ್ರತಿಯೊಬ್ಬರಲ್ಲೂ ವಿಭಿನ್ನ ಶಕ್ತಿ ಇರುತ್ತದೆ. ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲು ಸಂಸ್ಥೆಯ ಬೋಧಕೇತರ ಸಿಬ್ಬಂದಿ ಸೇರಿದಂತೆ ಹಲವರಿಗೆವಸ್ತ್ರದಾನ ಮಾಡಲಾಗುತ್ತಿದೆ’ ಎಂದರು.

ಸತ್ಯ ಸಾಯಿಬಾಬಾ ಟ್ರಸ್ಟ್ ಮುಖ್ಯಸ್ಥೆ ಜಯಲಕ್ಷ್ಮಿ, ಪ್ರಾಂಶುಪಾಲ ಡಾ.ಅಜಯ್ ಚಂದ್ರನ್, ಅಮರನಾಥ್, ರಂಗನಾಥ್, ಕಿರಣ್ ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.