ADVERTISEMENT

ವಿಶ್ವ ಹವ್ಯಕ ಸಮ್ಮೇಳನ: ಅಹಿಚ್ಛತ್ರದಲ್ಲಿ ಜ್ಯೋತಿಗೆ ಚಾಲನೆ‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:30 IST
Last Updated 25 ಡಿಸೆಂಬರ್ 2024, 16:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಡಿ.27ರಿಂದ 29ರವರೆಗೆ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆಗಾಗಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ಬುಧವಾರ ಜ್ಯೋತಿ ಹೊರಟಿದೆ.

ADVERTISEMENT

2,300 ಕಿ.ಮೀ. ದೂರದ ಅಹಿಚ್ಛತ್ರದ ಗ್ರಾಮದಲ್ಲಿರುವ ರಾಮ ದೇವಾಲಯದಿಂದ 'ಅಹಿಚ್ಛತ್ರ ಜ್ಯೋತಿ'ಗೆ ಚಾಲನೆ ನೀಡಲಾಯಿತು. ಈ ದೇವಸ್ಥಾನದಲ್ಲಿ 50 ವರ್ಷಗಳಿಂದ ಅಖಂಡ ಜ್ಯೋತಿಯು ಬೆಳಗುತ್ತಿದ್ದು, ಆ ಜ್ಯೋತಿಯಿಂದ ಇನ್ನೊಂದು ಜ್ಯೋತಿಯನ್ನು ಬೆಳಗಿ, ಯಾತ್ರೆಗೆ ಶ್ರೀಕಾರ ಹಾಕಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಟ್ರಸ್ಟಿಗಳು, ಉತ್ತರ ಪ್ರದೇಶ ವ್ಯಾಪಾರ ಮಂಡಳಿಯ ಅಧ್ಯಕ್ಷರು ಹಾಗೂ ಗ್ರಾಮದ ಪ್ರಮುಖರು ಅಹಿಚ್ಛತ್ರ ಜ್ಯೋತಿಗೆ ಶುಭ ಹಾರೈಸಿದರು.

ಉತ್ತರಕನ್ನಡದ ಹೈಗುಂದದಲ್ಲಿರುವ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ವಿ.ಡಿ ಭಟ್ ಮತ್ತು ತಂಡದವರು ಹೈಗುಂದದಿಂದ ಉತ್ತರ ಪ್ರದೇಶದ ಅಹಿಚ್ಛತ್ರಕ್ಕೆ ಯಾತ್ರೆ ನಡೆಸಿದರು. ಅಲ್ಲಿಂದ ಅಖಂಡ ಜ್ಯೋತಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.