ADVERTISEMENT

ಏಕಕಾಲಕ್ಕೆ ಎರಡು ಪದವಿ: ವಿಐಟಿ–ಎಎಸ್‌ಯು ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 18:53 IST
Last Updated 1 ಜುಲೈ 2019, 18:53 IST
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕೈ ಕುಲಕಿದ ಕೇ ಫಾರ್ರಿಸ್ ಮತ್ತು ವಿಐಟಿ ಕುಲಪತಿ ಜಿ. ವಿಶ್ವನಾಥನ್ ‌
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕೈ ಕುಲಕಿದ ಕೇ ಫಾರ್ರಿಸ್ ಮತ್ತು ವಿಐಟಿ ಕುಲಪತಿ ಜಿ. ವಿಶ್ವನಾಥನ್ ‌   

ಬೆಂಗಳೂರು: ವ್ಯವಹಾರ ವಿಶ್ಲೇಷಣೆ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಏಕಕಾಲದಲ್ಲೇಅಂತರರಾಷ್ಟ್ರೀಯ ಮಟ್ಟದ ಎರಡು ಪದವಿಗಳನ್ನು ನೀಡುವ ಒಪ್ಪಂದಕ್ಕೆ ಆಂಧ್ರ ಪ್ರದೇಶದ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಮತ್ತು ಆರಿಜೋನಾ ಸ್ಟೇಟ್ ಯುನಿವರ್ಸಿಟಿ (ಎಎಸ್‌ಯು) ಸಹಿ ಹಾಕಿವೆ.

ವಿಐಟಿ ಕುಲಪತಿ ಜಿ. ವಿಶ್ವನಾಥನ್ ಮತ್ತು ಎಎಸ್‌ಯುನ ಹಿರಿಯ ಸಹಾಯಕ ಡೀನ್ ಕೇ ಫಾರ್ರಿಸ್ ಸಹಿ ಹಾಕಿದರು. ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಈ ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ಎರಡು ಪದವಿಗಳನ್ನು ಒಟ್ಟಿಗೆ ಪಡೆದುಕೊಳ್ಳಬಹುದಾಗಿದೆ ಎಂದು ವಿಐಟಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT