
ಬೆಂಗಳೂರು: ಆರತಿ ಸ್ಕ್ಯಾನ್ಸ್ ಆ್ಯಂಡ್ ಲ್ಯಾಬ್ಸ್ ಜಯನಗರ ಕೇಂದ್ರದಲ್ಲಿ ‘ವೈಟಲ್ ಇನ್‌ಸೈಟ್ಸ್’ ಆರಂಭಿಸಿದೆ.
ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮೀರಿ, ವ್ಯಕ್ತಿಯ ದೇಹವನ್ನು ಮೂರು ಆಯಾಮಗಳಲ್ಲಿ ‘ವೈಟಲ್ ಇನ್‌ಸೈಟ್ಸ್’ ಪರೀಕ್ಷೆಗೆ ಒಳಪಡಿಸಲಿದೆ. ದೇಹದ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ (ಎಂಆರ್‌ಐ), ಡಿಇಎಕ್ಸ್‌ಎ ಸ್ಕ್ಯಾನ್, ವಿಒ₂ ಮ್ಯಾಕ್ಸ್ ಪರೀಕ್ಷೆ, ರಕ್ತ ಪರೀಕ್ಷೆಯ ಸಮಗ್ರ ವಿಶ್ಲೇಷಣೆ, ದೈಹಿಕ ಸಾಮರ್ಥ್ಯ ಮತ್ತು ಸಮತೋಲನದ ಮೌಲ್ಯಮಾಪನ ನಡೆಸಲಿದೆ ಎಂದು ವಿಕಿರಣ ತಜ್ಞ, ಆರತಿ ಸ್ಕ್ಯಾನ್ಸ್ ಆ್ಯಂಡ್ ಲ್ಯಾಬ್ಸ್‌ನ ನಿರ್ದೇಶಕ ಡಾ. ಪ್ರಸನ್ನ ವಿಘ್ನೇಶ್ ತಿಳಿಸಿದರು.
‘ಬೆಂಗಳೂರು ಕೇಂದ್ರದಲ್ಲಿ 'ವೈಟಲ್ ಇನ್‌ಸೈಟ್ಸ್’ ಮೂಲಕ ದತ್ತಾಂಶ ಆಧಾರಿತ ಕಾರ್ಯಕ್ಷಮತೆ ಮತ್ತು ವ್ಯಕ್ತಿಗಳು ಹೆಚ್ಚು ವರ್ಷ ಆರೋಗ್ಯದಿಂದ ಜೀವಿಸಲು ನೆರವಾಗುವ ಮಾಹಿತಿಯನ್ನು ನೀಡಲಾಗುತ್ತದೆ. ಸ್ಪಷ್ಟತೆ, ನಿಯಂತ್ರಣ ಮತ್ತು ಆತ್ಮವಿಶ್ವಾಸದಿಂದ ಬದುಕಲು ವ್ಯಕ್ತಿಗಳನ್ನು ಸಬಲೀಕರಣಗೊಳಿಸಲಾಗುತ್ತದೆ’ ಎಂದರು.
ರಾಯಲ್ ಚಾಲೆಂಜರ್ಸ್ ತಂಡದ ದೈಹಿಕ ಕಾರ್ಯಕ್ಷಮತೆ ತರಬೇತುದಾರ ಬಸು ಶಂಕರ್ ಅವರು ‘ವೈಟಲ್ ಇನ್‌ಸೈಟ್ಸ್’ ಕೇಂದ್ರ ಉದ್ಘಾಟಿಸಿದರು. ಸಂಸ್ಥೆ ನಿರ್ದೇಶಕರಾದ ಡಾ. ಆರತಿ ಪ್ರಸನ್ನ, ಡಾ. ಅರುಣ್‌ಕುಮಾರ್ ಗೋವಿಂದರಾಜನ್, ವೈಟಲ್ ಇನ್‌ಸೈಟ್ಸ್‌ನ ಮುಖ್ಯಸ್ಥ ಅವ್ನೀಶ್ ಪರೇಖ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.