
ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ
ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತಭಾರತೀಯಿಂದ ‘ವಿವೇಕದೀಪ್ತಿ’ ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಹಾಗೂ ‘ದಕ್ಷಿಣಾಸ್ಯದರ್ಶಿನೀ’ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮ ಜನವರಿ 29ರಿಂದ ಫೆ.1ರ ವರೆಗೆ ನಡೆಯಲಿದೆ. ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಜನವರಿ 31ರಂದು ಬೆಂಗಳೂರು ಅರಮನೆ ಮೈದಾನದ 'ಕೃಷ್ಣವಿಹಾರ'ದಲ್ಲಿ ನಡೆಯಲಿದೆ.
ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಮಹಾಸ್ವಾಮಿಯವರ ದಿವ್ಯಾನುಗ್ರಹದೊಂದಿಗೆ ತತ್ಕರಕಮಲಸಂಜಾತರಾದ ಜಗದ್ಗುರು ಶಂಕರಾಚಾರ್ಯ ವಿಧುಶೇಖರಭಾರತೀ ಸ್ವಾಮಿಜಿಯವರ ದಿವ್ಯ ಸಾನ್ನಿಧ್ಯ ಈ ಕಾರ್ಯಕ್ರಮಕ್ಕೆ ಇರಲಿದ್ದು, ಯಡತೊರೆ ಶ್ರೀಗಳಾದ ಶಂಕರಭಾರತೀ ಮಹಾಸ್ವಾಮೀಜಿ ಹಾಗೂ ತತ್ಕರಕಮಲಸಂಜಾತರಾದ ಬ್ರಹ್ಮಾನಂದಭಾರತೀ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.