ADVERTISEMENT

‘ವಿಂಟೇಜ್’ ವಾಹನದಲ್ಲಿ ಮತದಾನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 21:37 IST
Last Updated 30 ಏಪ್ರಿಲ್ 2023, 21:37 IST
ವಿಂಟೇಜ್‌ ಕಾರುಗಳಲ್ಲಿ ಸಾಗಿದ ಅಧಿಕಾರಿಗಳು ಮತದಾನದ ಬಗ್ಗೆ ಭಾನುವಾರ ಜಾಗೃತಿ ಮೂಡಿಸಿದರು – ಪ್ರಜಾವಾಣಿ ಚಿತ್ರ
ವಿಂಟೇಜ್‌ ಕಾರುಗಳಲ್ಲಿ ಸಾಗಿದ ಅಧಿಕಾರಿಗಳು ಮತದಾನದ ಬಗ್ಗೆ ಭಾನುವಾರ ಜಾಗೃತಿ ಮೂಡಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಧಾನಸಭೆ ಚುನಾವಣೆಯ ಪ್ರಯುಕ್ತ ನಗರದ ವಿವಿಧೆಡೆ ಭಾನುವಾರ ಸಂಚರಿಸಿದ ವಿಂಟೇಜ್ ಕಾರು ಹಾಗೂ ಬೈಕ್‌ಗಳು, ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದವು. 

ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ರ್‍ಯಾಲಿ ನಡೆಸಿತು. ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ರಜನೀಶ್ ಗೋಯಲ್, ಶಾಲಿನಿ ರಜನೀಶ್, ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ರ್‍ಯಾಲಿಗೆ ಚಾಲನೆ ನೀಡಿದರು.

ಕಾರುಗಳ ಗ್ಲಾಸ್‌ ಮೇಲೆ ಮತದಾನ ಜಾಗೃತಿ ಸಂದೇಶಗಳನ್ನು, ಬ್ಯಾನರ್‌ಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಮಾರ್ಗದುದ್ದಕ್ಕೂ ಚಾಲಕರು ಕೈ ಬೀಸುತ್ತಾ ಸಾಗಿದರು. ಸಾಲಾಗಿ ಸಾಗಿದ ಕಾರುಗಳು ಸಾರ್ವಜನಿಕರ ಗಮನ ಸೆಳೆದವು.

ADVERTISEMENT

ವಿಧಾನಸೌಧದ ಮುಂಭಾಗದಿಂದ ಕಾಫಿ ಬೋರ್ಡ್, ಮಿನ್ಸ್ಕ್ ಸ್ಕ್ವೇರ್, ಚಿನ್ನಸ್ವಾಮಿ ಕ್ರೀಡಾಂಗಣ, ಅನಿಲ್ ಕುಂಬ್ಳೆ ವೃತ್ತ, ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತಕ್ಕೆ ಸಾಗಿ, ಎಂ.ಜಿ. ರಸ್ತೆಯ ಮೂಲಕ ಕಸ್ತೂರಬಾ ರಸ್ತೆ, ಕಂಠೀರವ ಕ್ರೀಡಾಂಗಣಕ್ಕೆ ತಲುಪಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.