ADVERTISEMENT

ಮತದಾರರ ಪಟ್ಟಿ: ಪರಿಷ್ಕರಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:58 IST
Last Updated 1 ಜುಲೈ 2021, 21:58 IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಉತ್ತರ, ದಕ್ಷಿಣ, ಪೂರ್ವ, ಯಲಹಂಕ ಹಾಗೂ ಆನೇಕಲ್ ತಾಲ್ಲೂಕಿನ ಒಟ್ಟು 25 ಜಿಲ್ಲಾ ಪಂಚಾಯಿತಿ ಮತ್ತು 69 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ.

‘ಅಂತಿಮ ಮತದಾರರ ಪಟ್ಟಿಗಳನ್ನು ಜೂ.28ರಂದು ಜಿಲ್ಲೆಯ ತಾಲ್ಲೂಕು ಮತಗಟ್ಟೆ ಕೇಂದ್ರಗಳಲ್ಲಿ ಸಾರ್ವಜನಿಕರ ಗಮನಕ್ಕೆ ಪ್ರಚುರ ಪಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದ್ದಲ್ಲಿ ಅಥವಾ ನ್ಯೂನತೆಗಳಿದ್ದಲ್ಲಿ ಸೇರ್ಪಡೆ ಮತ್ತು ಪರಿಷ್ಕರಣೆಗೆ ಮನವಿ ಸಲ್ಲಿಸಬಹುದು’ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಉತ್ತರ ಉಪವಿಭಾಗಧಿಕಾರಿ ರಂಗನಾಥ್(9886241563), ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್ ರಾಮ ಲಕ್ಷ್ಮಯ್ಯ (7019670769), ಬೆಂಗಳೂರು ಪೂರ್ವ ತಹಶೀಲ್ದಾರ್ಅಜಿತ್ ಕುಮಾರ್ ರೈ (9000001368), ಯಲಹಂಕ ತಹಶೀಲ್ದಾರ್ ನರಸಿಂಹಮೂರ್ತಿ (9986660803), ಆನೇಕಲ್ ತಹಶೀಲ್ದಾರ್ ಪಿ. ದಿನೇಶ್ (9845411333), ಹೆಬ್ಬಗೋಡಿ ನಗರಸಭೆಯ ಆಯುಕ್ತ ಹೇಮಂತ್ ಶರಣ್ ಜೆ. (9845816773), ಚಂದಾಪುರ ನಗರಸಭೆಯ ಮುಖ್ಯಾಧಿಕಾರಿ ರಮೇಶ್ (8710980909), ಜಿಗಣಿ ಪುರಸಭೆಯ ಮುಖ್ಯಾಧಿಕಾರಿ ಅಮರನಾಥ (9902787898) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.