ADVERTISEMENT

ಮತದಾರ ಪಟ್ಟಿ ಮ್ಯಾಪಿಂಗ್: 3 ವಾರ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:10 IST
Last Updated 17 ಜನವರಿ 2026, 16:10 IST
ಮತದಾರರ ಪಟ್ಟಿ ಪರಿಶೀಲಿಸುತ್ತಿರುವ ಮತದಾರ
ಮತದಾರರ ಪಟ್ಟಿ ಪರಿಶೀಲಿಸುತ್ತಿರುವ ಮತದಾರ   

ಬೆಂಗಳೂರು: ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವಭಾವಿ ತಯಾರಿ ಮುಂದುವರೆದಿದ್ದು, 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಯೊಂದಿಗೆ ‌ಮ್ಯಾಪಿಂಗ್ ಮಾಡುವ ಚಟುವಟಿಕೆಯನ್ನು ಜ.13ರಿಂದ ಮೂರು ವಾರಗಳಿಗೆ ವಿಸ್ತರಣೆ ಮಾಡಲಾಗಿದೆ.

ಮತದಾರರ ಪಟ್ಟಿಯೊಂದಿಗೆ ತಾಳೆಯಾಗದೇ ಇರುವ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದು ಮ್ಯಾಪಿಂಗ್ ಪೂರ್ಣಗೊಳಿಸಲಿದ್ದಾರೆ ಎಂದು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರ ಮಸುಕು ಆಗಿರುವ, ಅತೀ ಸಣ್ಣ ಫೋಟೊ ಅಥವಾ ಭಾವಚಿತ್ರ ಸರಿಯಾಗಿ ಕಾಣದಿರುವುದು, ಮತದಾರರ ಹೆಸರು, ಲಿಂಗ ಹಾಗೂ ವಿಳಾಸದಲ್ಲಿ ಆಗಿರುವ ಲೋಪದೋಷ ಪತ್ತೆ ಹಚ್ಚಿ ಬಿಎಒ, ಆ್ಯಪ್‌ ಮುಖಾಂತರ ಅಥವಾ ಮತದಾರರಿಂದ ನಮೂನೆ-8ರಲ್ಲಿ ಅರ್ಜಿ ಪಡೆಯುವ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ಮಾಹಿತಿ ಒದಗಿಸಿ ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿರುವಂತಹ ದೋಷಗಳನ್ನು ಸರಿಪಡಿಸಿಕೊಳ್ಳಲು ಮತದಾರರು ಭಾರತ ಚುನಾವಣಾ ಆಯೋಗದ ಪೋರ್ಟಲ್‌  https://voters.eci.gov.in/ ಇದರಲ್ಲಿ ನಮೂನೆ-8ನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.