ADVERTISEMENT

ಗೋಡೆ ಸಮೇತ ಶೆಡ್ ಕುಸಿತ: ಕಾರ್ಮಿಕ ಸಾವು, ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 6:43 IST
Last Updated 6 ನವೆಂಬರ್ 2020, 6:43 IST
   

ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಗೋಡೆ ಸಮೇತ ಶೆಡ್ ಕುಸಿದಿದ್ದು, ಬಿಹಾರದ ಕಾರ್ಮಿಕ ಪೂರನ್ ಪೂಜಾರಿ (19) ಎಂಬುವರು ಮೃತಪಟ್ಟಿದ್ದಾರೆ.

ಇಸ್ಕಾನ್ ದೇವಸ್ಥಾನ ಸಮೀಪದಲ್ಲಿ ಸಿಕಾನ್ ಕಂಪನಿ ವತಿಯಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು.

ಶೆಡ್‌ಗೆ ಹೊಂದಿಕೊಂಡು ದೊಡ್ಡ ಗೋಡೆ ಇತ್ತು. ಬೆಳಿಗ್ಗೆ 5.30ರ ಸುಮಾರಿಗೆ ಏಕಾಏಕಿ ಗೋಡೆ ಕುಸಿದು ಶೆಡ್ ಮೇಲೆ ಬಿದ್ದಿತ್ತು. ಶೆಡ್ ಸಹ ಕುಸಿದು ಬಿತ್ತು. ಘಟನೆಯಲ್ಲಿ ಭವಾನಿ ಸಿಂಗ್ (21) ಹಾಗೂ ಮಿಥುನ್ (22) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.