ನೆಲಮಂಗಲ: ಬೈಕ್‌ನಲ್ಲಿ ವ್ಹೀಲಿ ಮಾಡುತ್ತಿದ್ದ ಯುವಕನನ್ನು ನೆಲಮಂಗಲ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ರಾಘವೇಂದ್ರ ನಗರ ನಿವಾಸಿ ಅಭಿಷೇಕ್ (20) ಬಂಧಿತ ಯುವಕ. ಅಭಿಷೇಕ್ ಇನ್‌ಸ್ಟಾಗ್ರಾಂನಲ್ಲಿ 26 ನಕಲಿ ಖಾತೆಗಳನ್ನು ತೆರೆದಿದ್ದ. ಪ್ರತಿಯೊಂದರಲ್ಲೂ 2,000 ದಿಂದ 3,000 ಫಾಲೋವರ್ಸ್ ಇದ್ದರು. ಒಂದೊಂದು ಖಾತೆಯಲ್ಲೂ 17 ರಿಂದ 20 ವ್ಹೀಲಿ ಮಾಡುವ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್‌ಸ್ಟೆಬಲ್ ಲಿಂಗರಾಜು ಅವರು ವಿಡಿಯೊಗಳನ್ನು ನೋಡಿ, ಯುವಕನ ಬೈಕ್ ನಂಬರ್ ಪಡೆದು ಪತ್ತೆ ಹಚ್ಚಿದ್ದಾರೆ. ಬುಧವಾರ ಸಂಜೆ ಅಭಿಷೇಕ್ ವ್ಹೀಲಿ ಮಾಡಿಕೊಂಡು ಕುಣಿಗಲ್ ಕಡೆ ಹೋಗುವುದನ್ನು ಗಮನಿಸಿದ ಸಬ್‌ಇನ್‌ಸ್ಪೆಕ್ಟರ್ ನವೀನ್ ನೇತೃತ್ವದ ತಂಡ, ಆತನನ್ನು ಹಿಂಬಾಲಿಸಿ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.