ಹೊರ ವರ್ತುಲ ರಸ್ತೆಯಲ್ಲಿನ ಸಂಚಾರ ದಟ್ಟಣೆ
ಪಿಟಿಐ ಚಿತ್ರ
ಬೆಂಗಳೂರು: ವೈಟ್‍ಫೀಲ್ಡ್, ಹೋಪ್ ಫಾರಂ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಗುರುವಾರದಿಂದಲೇ ಇದು ಜಾರಿಗೆ ಬಂದಿದೆ.
ರಾಯಲ್ ಮಾರ್ಟ್ ಜಂಕ್ಷನ್‍ನಲ್ಲಿ ವಾಹನ ಸವಾರರು ‘ಯು’ ತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಅಂಬೇಡ್ಕರ್ ಗುಟ್ಟೆಯಿಂದ ಹೋಪ್ ಫಾರಂ ಕಡೆಗೆ ಸಂಚರಿಸುವ ವಾಹನ ಸವಾರರು, ವಿಜಯನಗರ ರಸ್ತೆಯನ್ನು ಬಳಸಿ ಮುನಿಸಿಂಗ್ ಜಂಕ್ಷನ್ ಕಡೆಯಿಂದ ಹೋಪ್ ಫಾರಂ ಮತ್ತು ಐಟಿಪಿಎಲ್ ಕಡೆಗೆ ಸಂಚರಿಸಬಹುದು. ರಾಯಲ್ ಮಾರ್ಟ್ ಮತ್ತು ವೈಟ್‍ಫೀಲ್ಡ್ ಕಡೆಯಿಂದ ಅಂಬೇಡ್ಕರ್ ಗುಟ್ಟೆ ಕಡೆಗೆ ಹೋಗುವ ವಾಹನ ಸವಾರರು ಹೋಪ್ ಫಾರಂ ಮೂಲಕ ಸಂಚರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.