ಬೆಂಗಳೂರು: ಹ್ಯಾಂಡ್ಲಾಕ್ ಮುರಿದು ಹಾಗೂ ನಕಲಿ ಕೀ ಬಳಸಿ, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ₹50 ಲಕ್ಷ ಮೌಲ್ಯದ 39 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದ್ (29), ಪಾವಗಡದ ಮಹಾಲಿಂಗಯ್ಯ (27) ಹಾಗೂ ಚಿತ್ತಯ್ಯ (26) ಬಂಧಿತರು. ಇವರಿಂದ 5 ರಾಯಲ್ ಎನ್ಫೀಲ್ಡ್, 7 ಯಮಹ ಆರ್ಎಕ್ಸ್, 14 ಹೀರೊ ಹೊಂಡಾ, 2 ಹೊಂಡಾ ಆಕ್ಟಿವಾ, 5 ಹೊಂಡಾ ಡಿಯೊ, 2 ಹೊಂಡಾ ಶೈನ್, ತಲಾ ಒಂದು ಬಜಾಬ್ ಪಲ್ಸರ್, ಯಮಹಾ ಎಫ್ಜೆಡ್, ಟಿವಿಎಸ್ ಸ್ಕೂಟಿ ಹಾಗೂ ಟಿವಿಎಸ್ ಎಕ್ಸ್ಎಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.