
ಪೀಣ್ಯ–ದಾಸರಹಳ್ಳಿ: ಉತ್ತರ ತಾಲ್ಲೂಕಿನ ತೋಟದಗುಡ್ಡದಹಳ್ಳಿಯ ಸಾಯಿರಾಮ ಲೇಔಟ್‌ನಲ್ಲಿ ನೆಲಸಿದ್ದ ಗೃಹಿಣಿಯೊಬ್ಬರು ತಮ್ಮ ಮನೆಯಲ್ಲಿ ನೇಣುಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೌಭಾಗ್ಯ (31) ಆತ್ಮಹತ್ಯೆ ಮಾಡಿಕೊಂಡವರು.
‘ಎರಡು ವರ್ಷದ ಹಿಂದೆ ಸೌಭಾಗ್ಯ ಅವರ ಪತಿ ಮೃತಪಟ್ಟಿದ್ದರು. ಸೌಭಾಗ್ಯ ಅವರು ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ನೆಲಸಿದ್ದರು. ಕೈವಾರದ ಸೌಭಾಗ್ಯ ಅವರು ತೋಟದಗುಡ್ಡದಹಳ್ಳಿಯ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿ ಮೃತಪಟ್ಟ ಬಳಿಕ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ದೇವಸ್ಥಾನ ಬಿಟ್ಟರೆ ಬೇರೆಲ್ಲೂ ಹೋಗುತ್ತಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಮಹಿಳೆ ಸಾವಿನಿಂದ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಮನೆಯಲ್ಲಿ ಮರಣ ಪತ್ರ ದೊರೆತಿದೆ. ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕೈವಾರದಲ್ಲಿ ನೆಲಸಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.