ADVERTISEMENT

ಬೆಂಗಳೂರು | ಭಜನೆ ಮಾಡುತ್ತಿದ್ದ ವೇಳೆ ಮಹಿಳೆಯ ಚಿನ್ನದ ಸರ ಕಳ್ಳತನ; ವಿಡಿಯೊ ನೋಡಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 18:51 IST
Last Updated 15 ಅಕ್ಟೋಬರ್ 2024, 18:51 IST
   

ಬೆಂಗಳೂರು: ನಗರದ ನಂದಿನಿ ಲೇಔಟ್‌ನ ಶಂಕರಪುರದ ವಿನಾಯಕ ದೇವಸ್ಥಾನದಲ್ಲಿ ಕಿಟಕಿ ಕುಳಿತು ಮಹಿಳೆ ಭಜನೆ ಮಾಡುವ ವೇಳೆ ಕಳ್ಳನೊಬ್ಬ ಕಿಟಕಿಯಿಂದಲೇ ಕುತ್ತಿಗೆಗೆ ಕೈಹಾಕಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಈ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ  ಸೆರೆಯಾಗಿದೆ. 

ಮಹಿಳೆ ಜೋರಾಗಿ ಕಿರುಚಿಕೊಂಡಿದ್ದರಿಂದ ಭಜನೆ ಮಾಡುತ್ತಿದ್ದ ಮಹಿಳೆಯರು ಹೊರ ಬಂದು ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರು. ಅಷ್ಟರಲ್ಲಿ ಆತ ಓಡಿ ಹೋಗಿದ್ದ. ಕಿತ್ತುಕೊಳ್ಳುವ ವೇಳೆ ಬಿಗಿಯಾಗಿ ಹಿಡಿದುಕೊಂಡಿದ್ದ ಪರಿಣಾಮ 70 ಗ್ರಾಂ. ಸರ ತುಂಡಾಗಿ 30 ಗ್ರಾಂ.ನ ಸರದ ತುಂಡು ಕಳ್ಳನ ಪಾಲಾಗಿದೆ. ಮಂಗಳಾ ಅವರ ದೂರು ಆಧರಿಸಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.