ADVERTISEMENT

ಮಳೆಯಿಂದ ಕಾಮಗಾರಿ ವಿಳಂಬ: ಬಿಬಿಎಂಪಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 16:47 IST
Last Updated 20 ನವೆಂಬರ್ 2021, 16:47 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ನಗರದಲ್ಲಿ‌ ಹೆಚ್ಚಿನ ಮಳೆ ಆಗಿರುವುದರಿಂದ ಗೂಡ್‌ಶೆಡ್‌ ರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಅಡಚಣೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದಾರೆ.

ಗೂಡ್ ಶೆಡ್ ರಸ್ತೆಯಲ್ಲಿ (ಡಾ.ಟಿ.ಸಿ.ಎಂ. ರಾಯನ್ ರಸ್ತೆ) ಬಿಬಿಎಂಪಿ ವತಿಯಿಂದ ವೈಟ್‌‌ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಆದ್ದರಿಂದ ಮೈಸೂರು ರಸ್ತೆಯ ಮಾರುಕಟ್ಟೆ ಮೇಲ್ಸೇತುವೆಯಿಂದ ಗೂಡ್‌ಶೆಡ್‌ ರಸ್ತೆಗೆಆ. 19ರಿಂದ ಸಂಚಾರ ನಿರ್ಬಂಧಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 3 ತಿಂಗಳ ಕಾಲಾವಧಿ ನಿಗದಿ ಮಾಡಲಾಗಿತ್ತು.

ಹೆಚ್ಚುವರಿ ಒಳಚರಂಡಿ ಮತ್ತು ನೀರಿನ ಕೊಳವೆ ಅಳವಡಿಸುವ ಮಾರ್ಗದಲ್ಲಿ ಗಟ್ಟಿ ಬಂಡೆ ಸಿಕ್ಕಿದ್ದರಿಂದ ಅದನ್ನು ಒಡೆಯುವ ಕಾಮಗಾರಿಯೂ ವಿಳಂಬವಾಗಿದೆ. ರಾಜಕಾಲುವೆ ಮತ್ತು ಮೋರಿ ಕೂಡ ಶಿಥಿಲಗೊಂಡಿದ್ದು, ಮರು ನಿರ್ಮಾಣ ಆಗಬೇಕಿದೆ. ಬಿಬಿಎಂಪಿ ರಾಜಕಾಲುವೆ ವಿಭಾಗದಿಂದ ದುರಸ್ತಿ ಪಡಿಸಲಾಗುತ್ತಿದೆ. ಮಳೆಯಿಂದ ಕಾಮಗಾರಿ ವಿಳಂಬವಾಗಿದ್ದು, ಶೀಘ್ರ ಪೂರ್ಣಗೊಳಿಸಿ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.

ADVERTISEMENT

‘ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ’ ಎಂಬ ಶೀರ್ಷಿಕೆಯಡಿ ಸಂಚಾರ ಸಮಸ್ಯೆ ಕುರಿತು ‘ಪ್ರಜಾವಾಣಿ’ ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.