ADVERTISEMENT

ಕಾರು ಚಲಾಯಿಸುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ: ಮಹಿಳೆಗೆ ದಂಡ

ಮಹಿಳೆಗೆ ದಂಡ ವಿಧಿಸಿದ ನಗರದ ಸಂಚಾರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 20:00 IST
Last Updated 13 ಫೆಬ್ರುವರಿ 2025, 20:00 IST
<div class="paragraphs"><p>ಐ-ಸ್ಟಾಕ್ ಚಿತ್ರ</p></div>

ಐ-ಸ್ಟಾಕ್ ಚಿತ್ರ

   

ಬೆಂಗಳೂರು: ಕಾರು ಚಾಲನೆ ಮಾಡುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪತ್ತೆ ಹಚ್ಚಿರುವ ನಗರದ ಸಂಚಾರ ವಿಭಾಗದ ಪೊಲೀಸರು, ಅವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಉತ್ತರ ವಿಭಾಗದ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದನ್ನು ಗಮನಿಸಿದ ಪಕ್ಕದ ಕಾರಿನ ಪ್ರಯಾಣಿಕರು, ಮೊಬೈಲ್‌ನಲ್ಲಿ ಅದರ ದೃಶ್ಯವನ್ನು ಸೆರೆ ಹಿಡಿದಿದ್ದರು. ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ವಿಡಿಯೊ ತುಣುಕನ್ನು ಗಮನಿಸಿದ ಸಂಚಾರ ವಿಭಾಗದ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ.

ADVERTISEMENT

‘ಮನೆಯಲ್ಲಿ ಕೆಲಸ ಮಾಡಿ. ವಾಹನವನ್ನು ಚಾಲನೆ ಮಾಡುತ್ತಾ ಕೆಲಸ ಮಾಡಿದರೆ ತಮಗೂ ಅಪಾಯ. ಎದುರಿಗೆ ಬರುತ್ತಿದ್ದವರಿಗೂ ಸಮಸ್ಯೆ. ಇನ್ನು ಮುಂದೆ ಆ ರೀತಿಯ ಚಾಲನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.