ADVERTISEMENT

ಸಾಂಪ್ರದಾಯಿಕ ಕತ್ತಿ ನೃತ್ಯ ಪ್ರದರ್ಶನ ಮಾಡಿ ವಿಶ್ವ ದಾಖಲೆ ಮಾಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 15:40 IST
Last Updated 6 ಡಿಸೆಂಬರ್ 2025, 15:40 IST
ಬಿ.ಎನ್.ಆರ್.ಮೆಮೋರಿಯಲ್ ಶಾಲೆಯ ಮಕ್ಕಳು ಕತ್ತಿ ನೃತ್ಯ ಪ್ರದರ್ಶನ ನೀಡಿದರು.
ಬಿ.ಎನ್.ಆರ್.ಮೆಮೋರಿಯಲ್ ಶಾಲೆಯ ಮಕ್ಕಳು ಕತ್ತಿ ನೃತ್ಯ ಪ್ರದರ್ಶನ ನೀಡಿದರು.   

ಕೆ.ಆರ್.ಪುರ: ರಾಮಮೂರ್ತಿನಗರದ ಬಿ.ಎನ್.ಆರ್. ಮೆಮೊರಿಯಲ್ ಶಾಲೆಯ ವಿದ್ಯಾರ್ಥಿಗಳು 5.26 ನಿಮಿಷದಲ್ಲಿ ಒಂದೇ ವೇದಿಕೆಯಲ್ಲಿ ಸಾಂಪ್ರದಾಯಿಕ ಕತ್ತಿ ನೃತ್ಯ ಪ್ರದರ್ಶನ ಮಾಡಿ ವಿಶ್ವ ದಾಖಲೆ ನಿರ್ಮಿಸಿದರು.

ಕೆ.ಆರ್.ಪುರದ ಐಟಿಐನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 391 ವಿದ್ಯಾರ್ಥಿಗಳು ಏಕಕಾಲದಲ್ಲಿ ನೃತ್ಯ ಪ್ರದರ್ಶಿಸಿ ಎಲೈಟ್ ವರ್ಲ್ಡ್ ರೆಕಾರ್ಡ್, ಏಷ್ಯನ್ ಬುಕ್ ಆಫ್ ರೆಕಾರ್ಡ್ ಹಾಗೂ ‌ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಭಾಜನರಾದರು.

ಈ ಹಿಂದೆ 2010ರಲ್ಲಿ ಇದೇ ವಿಭಾಗದಲ್ಲಿ ಸ್ಮಾರ್ಟ್‌ಲ್ಯಾಂಡ್ ಶಾಲೆಯ 301 ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದರು.

ADVERTISEMENT

ಪ್ರಾಂಶುಪಾಲರಾದ ಎಂ.ಶಿಲ್ಪಾ ಶ್ರೀನಿವಾಸ್ ಮಾತನಾಡಿದರು. ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಮೋಹನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಗಾಯಕಿ ಅನನ್ಯ ಭಟ್, ನೃತ್ಯ ಸಂಯೋಜಕ ಭೂಷಣ್, ಶಾಲೆಯ ಅಧ್ಯಕ್ಷ ಎಂ.ರಾಜಹಂಸ, ಕಾರ್ಯದರ್ಶಿ ಆರ್.ನಾಗಭೂಷಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.