ADVERTISEMENT

ಇದ್ದೂ ಇಲ್ಲದಂತಾದ ಯಾತ್ರಿ ನಿವಾಸ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:46 IST
Last Updated 16 ಅಕ್ಟೋಬರ್ 2018, 19:46 IST
ಶಿವಗಂಗೆಯ ಯಾತ್ರಿನಿವಾಸ ಕಟ್ಟಡ
ಶಿವಗಂಗೆಯ ಯಾತ್ರಿನಿವಾಸ ಕಟ್ಟಡ   

ದಾಬಸ್‌ಪೇಟೆ: ಶಿವಗಂಗೆಯ ತೋಪಿನಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಯಾತ್ರಿ ನಿವಾಸ, ಯಾತ್ರಿಗಳ ಉಪಯೋಗಕ್ಕೆ ಬಾರದಂತಾಗಿದೆ.

ಪ್ರವಾಸೋದ್ಯಮ ಇಲಾಖೆಯು ₹ 1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿದೆ. ಶಿವಗಂಗೆ ಗಂಗಾಧರೇಶ್ವರಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ರಾಜು ಕಟ್ಟಡವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು.

‘ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಕಟ್ಟಡದ ಪರಿಸರ ಅಲ್ಪಸ್ವಲ್ಪ ಹಾಳಾಗಿದೆ. ಅದು ಯಾತ್ರಿಗಳಿಗೆ ನೀಡಲು ಆರಂಭಿಸಿದ ಮೇಲೆ ಎಲ್ಲಾ ಸರಿ ಹೋಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಈಗ ಕಟ್ಟಡ ಬಿರುಕು ಬಿಟ್ಟಿದೆ. ಗಾಜು ಒಡೆದಿದೆ. ಮಳೆ ನೀರು ಒಳಗೆ ನಿಂತಿದೆ, ರಾತ್ರಿ ವೇಳೆ ಪುಂಡಪೋಕರಿಗಳ, ಭಿಕ್ಷುಕರ ತಾಣವಾಗಿದೆ ಎಂಬುದು ಸ್ಥಳೀಯರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.