
ಯಲಹಂಕ:‘ಎಂಜಿನಿಯರಿಂಗ್ ತಂತ್ರಗಳನ್ನು ಬಳಸುವ ಮೂಲಕ ನೈಜ ಜೀವನದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನೈಪುಣ್ಯವನ್ನು ಬೆಳೆಸಿಕೊಳ್ಳುವುದೇ ಯಶಸ್ಸಿನ ಮೂಲ’ ಎಂದು ಗೂಗಲ್ ಕ್ಲೌಡ್ ಲೀಡರ್ ತಂಡದ ತಾಂತ್ರಿಕ ನಿರ್ದೇಶಕಿ ಶುಭ ಗಿರೀಶ್ ಅಭಿಪ್ರಾಯಪಟ್ಟರು.
ಹೆಬ್ಬಾಳದಲ್ಲಿರುವ ಏಟ್ರಿಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಉದ್ಭವ್-2025’ ನೂತನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಸದಾ ಕುತೂಹಲವುಳ್ಳವರಾಗಿ ಪ್ರಶ್ನಿಸುವ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು. ಶೈಕ್ಷಣಿಕವಾಗಿ ಅಂಕಗಳನ್ನು ಗಳಿಸುವುದರ ಜೊತೆಗೆ ವಾಸ್ತವದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು’ ಎಂದರು.
ಆಪಲ್ ಸಂಸ್ಥೆಯ(ಕ್ಯಾಲಿಫೋರ್ನಿಯಾ) ಫಿಸಿಕಲ್ ಡಿಸೈನ್ ಇಂಜಿನಿಯರ್ ವಿಕ್ರಮ್ ಪೋಲೆ ಮಾತನಾಡಿ, ‘ವಿಶ್ವದಲ್ಲಿ ಸಾಕಷ್ಟು ಎಂಜಿನಿಯರಿಂಗ್ ಕ್ಲಬ್‌ಗಳಿದ್ದು, ನೀವು ಸಾಧ್ಯವಾದಷ್ಟು ಮಟ್ಟಿಗೆ ಅಲ್ಲಿ ನೋಂದಾಯಿಸಿಕೊಳ್ಳಿರಿ; ಜನರೊಟ್ಟಿಗೆ ಬೆರೆತು, ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.
ಏಟ್ರಿಯಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸಿ.ಎಸ್.ಸುಂದರ್ ರಾಜು, ಪ್ರಾಂಶುಪಾಲ ಡಾ.ರಾಜೇಶ.ಎಸ್, ಉಪಪ್ರಾಂಶುಪಾಲರಾದ ಡಾ.ನಳಿನಾಕ್ಷಿ ಎನ್, ಶೈಕ್ಷಣಿಕ ವಿಭಾಗದ ಡೀನ್ ಡಾ.ರವಿಚಂದ್ರ ಕೆ.ಆರ್. ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.