ಯಲಹಂಕ: ಶಾಸಕ ಎಸ್.ಆರ್.ವಿಶ್ವನಾಥ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವತಿಯಿಂದ ಸಿಂಗನಾಯಕನಹಳ್ಳಿಯ ಹೋಟೆಲ್‌ನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ತ್ರಿಚಕ್ರವಾಹನ, ದಿನಪತ್ರಿಕೆಗಳ ವಿತರಕರಿಗೆ ಸೈಕಲ್, ಮಹಿಳೆಯರಿಗೆ ಹೊಲಿಗೆಯಂತ್ರ, ಬ್ಯುಟಿಷಿಯನ್ ಕಿಟ್, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಅಂಗನವಾಡಿ ಕೇಂದ್ರಗಳಿಗೆ ಟಿ.ವಿ, ಶಾಲಾ-ಕಾಲೇಜುಗಳಿಗೆ ಎಲ್‌ಇಡಿ ಪರದೆ, ಔಷಧಿ, ಟೈಲ್ಸ್ ಮತ್ತು ಕಟ್ಟಡ ಕಾರ್ಮಿಕರಿಗೆ ಕಿಟ್, ಕನ್ನಡಕ ಸೇರಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಕಾರುಗಳನ್ನು ವಿತರಿಸಲಾಯಿತು.
ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ 1210 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಶಾಸಕ ವಿಶ್ವನಾಥ್ ಮಾತನಾಡಿ, ‘ಹುಟ್ಟುಹಬ್ಬದ ನೆಪದಲ್ಲಿ ಬಡಜನರಿಗೆ ಹಾಗೂ ಫಲಾನುಭವಿಗಳಿಗೆ ಹಲವು ಸೌಲಭ್ಯಗಳನ್ನು ವಿತರಿಸಿರುವುದು ಸಂತಸ ತಂದಿದೆ. ಜನರ ಆಶೀರ್ವಾದವಿದ್ದರೆ ಕ್ಷೇತ್ರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಸಂಕಲ್ಪ ಮಾಡಲಾಗುವುದು’ ಎಂದು ತಿಳಿಸಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಅಲೋಕ್ ವಿಶ್ವನಾಥ್, ಸತೀಶ್ ಕಡತನಮಲೆ, ಡಿ.ಜಿ.ಅಪ್ಪಯಣ್ಣ, ಅದ್ದೆ ವಿಶ್ವನಾಥಪುರ ಮಂಜುನಾಥ್, ಟಿ.ಮುನಿರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ, ಎಸ್.ಜಿ.ಪ್ರಶಾಂತ್‌ರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.