ADVERTISEMENT

ಆನ್‌ಲೈನ್‌ನಲ್ಲಿ ಯೋಗ ತರಬೇತಿ

ಬಿಎಂಟಿಸಿ ಚಾಲಕರು, ನಿರ್ವಾಹಕರ ಒತ್ತಡ ನಿವಾರಣೆಗೆ ಹೊಸ ಮಾರ್ಗ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 21:00 IST
Last Updated 10 ಏಪ್ರಿಲ್ 2020, 21:00 IST
ಆನ್‌ಲೈನ್‌ ಯೋಗದ ವಿಡಿಯೊ
ಆನ್‌ಲೈನ್‌ ಯೋಗದ ವಿಡಿಯೊ   

ಬೆಂಗಳೂರು: ಸದಾ ಒತ್ತಡದಲ್ಲಿ ಕಾರ್ಯನಿವರ್ಹಿಸುವ ಬಿಎಂಟಿಸಿ ಚಾಲಕರು ಮತ್ತು ನಿವಾರ್ಹಕರು ಸೇರಿದಂತೆ ತನ್ನ
ಎಲ್ಲ ಸಿಬ್ಬಂದಿಗೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಆನ್‌ಲೈನ್‌ ಯೋಗ ತರಗತಿ ಆರಂಭಿಸಿದೆ.

ಒತ್ತಡ ನಿವಾರಣೆಯೊಂದಿಗೆ ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್‌ ಕಾಯ್ದುಕೊಳ್ಳಲುಲಾಕ್‌ಡೌನ್‌ ಸಮಯ
ವನ್ನು ಬಿಎಂಟಿಸಿ ಸಿಬ್ಬಂದಿ ಬಳಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಎಂಬ ಧ್ಯೇಯದೊಂದಿಗೆ ನಿರಾಕುಲ್‌ ಯೋಗ ತರಬೇತಿ ಕೇಂದ್ರದ ಸಹಯೋಗ
ದಲ್ಲಿಲಘು ವ್ಯಾಯಾಮಗಳನ್ನು ಹೇಳಿಕೊಡಲಾಗುತ್ತಿದೆ. ಸಂಸ್ಥೆಯ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ಕೇಂದ್ರದ ಅಮರ್‌ ಹಾಗೂ ಇತರ ಯೋಗಪಟುಗಳ ಯೋಗಾಸನತರಬೇತಿ ವಿಡಿಯೊಗಳನ್ನು ಬಿಎಂಟಿಸಿ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಈ ಯೂಟ್ಯೂಬ್‌ ಚಾನೆಲ್‌ ಒಂದು ಸಾವಿರ ಚಂದಾದಾರರನ್ನು ಹೊಂದಿದೆ. ಏಪ್ರಿಲ್‌ 9ರಂದು ಮೊದಲ 46 ನಿಮಿಷಗಳ ವಿಡಿಯೊ ಅಪ್‌ಲೋಡ್‌ ಮಾಡಲಾಗಿದ್ದು, 21 ಗಂಟೆಯಲ್ಲಿ 777 ಜನರು ವೀಕ್ಷಿಸಿದ್ದಾರೆ.

ಆರಂಭದಲ್ಲಿ ಉಸಿರಾಟ ಪ್ರಕಿಯೆ, ಪ್ರಾಣಾಯಾಮ, ಸೂರ್ಯ ನಮಸ್ಕಾರದಂತಹ ಕೆಲವು ಸರಳ ಆಸನ ಮತ್ತು ಲಘು ವ್ಯಾಯಾಮಾಗಳನ್ನು ಹೇಳಿಕೊಡಲಾಗುತ್ತಿದೆ.

ನಿರಾಕುಲ್‌ ಕೇಂದ್ರ ಉಚಿತವಾಗಿ ಈ ಕೆಲಸ ಮಾಡುತ್ತಿದೆ. ಇದಕ್ಕಾಗಿ ಯೋಗ ಕೇಂದ್ರ ಒಟ್ಟು ನಾಲ್ಕು ವಿಡಿಯೊ ಸಿದ್ಧಪಡಿಸಿದೆ. ಮೊದಲ ವಿಡಿಯೊ ಅಪ್‌ಲೋಡ್‌ ಮಾಡಲಾಗಿದ್ದು, ಇನ್ನೂ ಎರಡು ದಿನ ಬಿಟ್ಟು ಮತ್ತೊಂದು ವಿಡಿಯೊ ಅಪ್‌ಲೋಡ್‌ ಮಾಡಲಾಗುತ್ತದೆ.

ಬಿಎಂಟಿಸಿ ಒಟ್ಟು 33 ಸಾವಿರ ಸಿಬ್ಬಂದಿ ಹೊಂದಿದೆ. ವಾಹನ ಸಂಚಾರ ಸ್ಥಗಿತಗೊಂಡ ಕಾರಣ ಹೆಚ್ಚಿನ ಚಾಲಕರು ಮತ್ತು ನಿವಾರ್ಹಕರು ರಜೆಯಲ್ಲಿದ್ದಾರೆ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರ ಒತ್ತಡ ನಿವಾರಣೆ ಯೋಗ ನೆರವಾಗಲಿದೆ.

‘ಮನೆಯಲ್ಲೇ ಇರಿ, ಯೋಗ ಮಾಡಿ’ ಎಂಬ ಸಂದೇಶದೊಂದಿಗೆ ಎಲ್ಲ ಸಿಬ್ಬಂದಿಗೂ ವಾಟ್ಸ್‌ ಆ್ಯಪ್‌ ಮೂಲಕ ಲಿಂಕ್‌ ಕಳಿಸಲಾಗುತ್ತಿದೆ ಎಂದು ಬಿಎಂಟಿಸಿ ತಿಳಿಸಿದೆ.

ಸಾರ್ವಜನಿಕರೂ ಇದರ ಸದುಪಯೋಗ ಪಡೆದುಕೊಳ್ಳಬಹುದು. ಲಿಂಕ್‌:https://youtu.be/Ovgwj6VwW2k

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.