ADVERTISEMENT

ಫೇಸ್‌ಬುಕ್‌ ಜಾಹೀರಾತು ನಂಬಿ ಹಣ ಕಳೆದುಕೊಂಡ ಯುವತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 21:49 IST
Last Updated 4 ಸೆಪ್ಟೆಂಬರ್ 2023, 21:49 IST
ಫೇಸ್‌ಬುಕ್‌
ಫೇಸ್‌ಬುಕ್‌   

ಬೆಂಗಳೂರು: ಪಾರ್ಟ್‌ಟೈಮ್‌ ಉದ್ಯೋಗಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ ಖಾತೆಯಲ್ಲಿ ಬಂದಿದ್ದ ಜಾಹೀರಾತು ನಂಬಿ ಯುವತಿಯೊಬ್ಬರು ₹ 12 ಸಾವಿರ ಕಳೆದುಕೊಂಡಿದ್ದು, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಫೇಸ್‌ಬುಕ್‌ನಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಯುವತಿ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿದ್ದ. ಉದ್ಯೋಗ ಬೇಕಿದ್ದರೆ ಸ್ಕ್ಯಾನರ್‌ ಮೂಲಕ ₹ 750 ಮುಂಗಡ ಹಣ, ಆಧಾರ್ ಕಾರ್ಡ್‌ ಹಾಗೂ ಪಾಸ್‌ಪೋರ್ಟ್‌ ಅಳತೆ ಫೋಟೊ ನೀಡುವಂತೆ ಸೂಚಿಸಿದ್ದ. ಅದನ್ನೇ ನಂಬಿದ್ದ ಯುವತಿ ಆತ ಹೇಳಿದಂತೆ ಮಾಡಿದ್ದರು. ಬಳಿಕ ಹಂತ ಹಂತವಾಗಿ ಒಟ್ಟು ₹ 12,949 ಅನ್ನು ಗೂಗಲ್ ಪೇ ಮೂಲಕ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಕೆಲಸ ಕೊಡದಿದ್ದಾಗ ಹಣ ವಾಪಸ್‌ ನೀಡುವಂತೆ ಯುವತಿ ಕೇಳಿಕೊಂಡಿದ್ದರು. ಆದರೆ, ಹಣ ನೀಡದೆ ವಂಚಿಸಲಾಗಿದೆ. ಆರೋಪಿ ಪತ್ತೆಗೆ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.