ADVERTISEMENT

ಅಪರಾಧಗಳಲ್ಲಿ ಯುವಜನಾಂಗದ ಮೇಲುಗೈ: ರೀನಾ ಸುವರ್ಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 19:49 IST
Last Updated 15 ಜೂನ್ 2021, 19:49 IST
ರೀನಾ ಸುವರ್ಣ
ರೀನಾ ಸುವರ್ಣ   

ಬೆಂಗಳೂರು: ‘ಅಪರಾಧ ತಡೆಗಟ್ಟುವಲ್ಲಿ ಯುವಕರ ಪಾತ್ರ ಮಹತ್ವದ್ದು. ಆದರೆ, ಬಹುತೇಕ ಅಪರಾಧ
ಗಳಲ್ಲಿ ಯುವಕರ ಪಾತ್ರವೇ ಹೆಚ್ಚಾಗಿದ್ದು, ಯುವಕ ಮತ್ತು ಯುವತಿಯರೇ ಅಪರಾಧಗಳಲ್ಲಿ ಬಲಿಯಾಗುತ್ತಿರುವುದು ವಿಪರ್ಯಾಸ’ ಎಂದು ಎಸಿಪಿ ರೀನಾ ಸುವರ್ಣ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಘಟಕಆನ್‌ಲೈನ್ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಪರಾಧಗಳನ್ನು ತಡೆಗಟ್ಟುವಲ್ಲಿ ಯುವಕರ ಪಾತ್ರ’ ಕುರಿತು ಉಪನ್ಯಾಸ ನೀಡಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಕೌಟುಂಬಿಕ ದೌರ್ಜನ್ಯ ಹಾಗೂ ಚಿನ್ನಾಭರಣ ಕಳವು ಪ್ರಕರಣ ಹೆಚ್ಚಾಗಿವೆ.ತಮ್ಮ ಸನಿಹದಲ್ಲೇ ಅಪರಾಧಗಳು ನಡೆಯುತ್ತಿ
ದ್ದರೂ ತಮಗೆ ಸಂಬಂಧ
ಇಲ್ಲ ಎನ್ನುವಂತೆ ಜನ ಮಾನವೀಯತೆ ಮರೆತಿದ್ದಾರೆ’ ಎಂದು ದೂರಿದರು.

ADVERTISEMENT

ಕುಲಪತಿ ಕೆ.ಆರ್.ವೇಣುಗೋಪಾಲ್,‘ನಗರಗಳಲ್ಲಿ ಆಗುವಷ್ಟು ಗ್ರಾಮೀಣ ಪ್ರದೇಶದಲ್ಲಿ ಅಪರಾಧಗಳು ನಡೆಯುವುದಿಲ್ಲ. ಅಲ್ಲಿನ ಜನರಲ್ಲಿರುವ ಒಗ್ಗಟ್ಟೇ ಇದಕ್ಕೆ ಕಾರಣ’ ಎಂದರು.

ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಸಂಯೋಜನಾಧಿಕಾರಿ ಡಾ. ಎನ್.ಸತೀಶ್ ಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.