ADVERTISEMENT

ಇತಿಹಾಸದ ಬಗ್ಗೆ ಅವಜ್ಞೆ ಸಲ್ಲ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:55 IST
Last Updated 3 ಅಕ್ಟೋಬರ್ 2011, 6:55 IST

ಬೀದರ್:`ಇಂದಿನ ತಲೆಮಾರಿನ ಯುವಕರಲ್ಲಿ ಇತಿಹಾಸದ ಬಗ್ಗೆ ಅವಜ್ಞೆ ಮೂಡಿದೆ~ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಶುಕ್ರವಾರ ವಿಷಾದಿಸಿದರು.

ಅಕ್ಕಮಹಾದೇವಿ ಕಾಲೇಜಿನ ಇತಿಹಾಸ ವಿಭಾಗವು ಏರ್ಪಡಿಸಿದ್ದ `ಬೀದರ್ ಜಿಲ್ಲೆಯ ದೇಶಮುಖ ಮನೆತನಗಳು~ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವರ್ತಮಾನದಿಂದ ಮಾತ್ರ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಯುವಕರು ಹೊಸ ಆವಿಷ್ಕಾರಗಳಾದ ಕಂಪ್ಯೂಟರ್, ಇಂಟರ್‌ನೆಟ್, ಟ್ವಿಟರ್, ಫೇಸ್‌ಬುಕ್‌ಗಳ ಮಧ್ಯೆ ಸಿಲುಕಿದ್ದಾರೆ. ಹೊಸಲೋಕದಲ್ಲಿ ದಾರಿ ತಪ್ಪಿದೆ. ಆದರೆ ಈ ಆಧುನಿಕತೆ ಅಪಾಯಕಾರಿ ಅಂತ ಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಇತಿಹಾಸದ ಬಗ್ಗೆ ಅರಿವು ಇಟ್ಟುಕೊಂಡರೆ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಧಾರವಾಡದ ಕರ್ನಾಟಕ ಸಂಶೋಧನ ಸಂಸ್ಥೆಯ ಡಾ. ಆರ್.ಎಂ. ಷಡಕ್ಷರಯ್ಯ ಆಶಯ ಭಾಷಣ ಮಾಡಿ ಬೀದರ್ ಜಿಲ್ಲೆಯ ಆಡಳಿತ ವ್ಯವಸ್ಥೆ ಬಗ್ಗೆ ಅರಿಯ ಬೇಕಿದ್ದರೆ ದೇಶಮುಖ ಮನೆತನಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.

ಪತ್ರಾಗಾರ ಇಲಾಖೆಯ ನಿರ್ದೇಶಕ ಕಂಚಿವರದಯ್ಯ ಅತಿಥಿಗಳಾಗಿ ಮಾತನಾಡಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸವಣ್ಣಪ್ಪ ಹೊಸಾಳೆ, ಜಂಟಿ ಕಾರ್ಯದರ್ಶಿ ಶರಣಪ್ಪ ಬಳತಕರ್, ನಿರ್ದೇಶಕ ನಾಗಶೆಟ್ಟೆಪ್ಪ ಶಿವಣಕರ್ ಉಪಸ್ಥಿತರಿದ್ದರು.

ಪ್ರಚಾರ್ಯೆ ಪ್ರೇಮಾ ಸಿರ್ಸೆ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಲಾ ಕೊಟಗಿ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಎಸ್. ಮೈನಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವನಾಥ ಪಾಟೀಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.