ADVERTISEMENT

`ಏಡ್ಸ್ ಹರಡದಂತೆ ಮುನ್ನೆಚ್ಚರಿಕೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:24 IST
Last Updated 5 ಡಿಸೆಂಬರ್ 2012, 6:24 IST

ಬಸವಕಲ್ಯಾಣ: ಏಡ್ಸ್ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಡಾ.ಜಿ.ಎಸ್.ಭುರಳೆ ಹೇಳಿದರು.

ಅರ್ಬಿಟ್ ಸಂಸ್ಥೆಯಿಂದ ಮಂಗಳ ವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಇಲ್ಲಿ ಹಮ್ಮಿಕೊಂಡ ರ‌್ಯಾಲಿಯಲ್ಲಿ ಅವರು ಮಾತನಾಡಿದರು.

ಏಡ್ಸ್ ರೋಗಿಗಳೊಂದಿಗೂ ಸರಿಯಾಗಿ ವರ್ತಿಸಬೇಕು ಎಂದರು. ಅರ್ಬಿಟ್ ಸಂಸ್ಥೆ ಏಡ್ಸ್ ರೋಗ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿ ಸಿದರು.

ಸಿಸ್ಟ್‌ರ ಮೀನಾ ಮಾತನಾಡಿ ಏಡ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.
ಫಾದರ್ ಸ್ಟ್ಯಾನಿ ಲೋಬೋ ಮಾತನಾಡಿದರು.

ಫಾದರ್ ಜೆರಾಲ್ಡ್ ಸಾಗರ ಪಾರಿವಾಳ ಹಾರಿಬಿಡುವ ಮೂಲಕ ರ‌್ಯಾಲಿಗೆ ಚಾಲನೆ ಕೊಟ್ಟರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಶರಣಪ್ಪ ಮುಡಬಿಕರ್, ಮುಖಂಡ ಅರ್ಜುನ ಕನಕ, ಎಎಸ್‌ಐ ಶಿರೋಮಣಿ, ಫಾದರ ಜಗದೀಶ, ಫಾದರ್ ಜೆಜೋ, ಸಿಸ್ಟರ್ ರೋಜಾ, ಸ್ನೇಹ ಕಾರ್ಯಕ್ರಮದ ಸಂಯೋಜಕ ಶರಣಪ್ಪ ಪರೆಪ್ಪ ಪಾಲ್ಗೊಂಡಿದ್ದರು.
ಮಹಾತ್ಮಗಾಂಧಿ ವೃತ್ತದಿಂದ ಡಾ. ಅಂಬೇಡ್ಕರ ವೃತ್ತದವರೆಗೆ ರ‌್ಯಾಲಿ ನಡೆಸಲಾಯಿತು.

ವಿವಿಧ ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು, ಸ್ವಸಹಾಯ ಗುಂಪಿನ ಮಹಿಳೆಯರು, ಆರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಆಶಾದೀಪ ಕಾರ್ಯಕರ್ತರಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.