ADVERTISEMENT

ಕಳಪೆ ಕಾಮಗಾರಿಗೆ ಅವಕಾಶ ಬೇಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 12:15 IST
Last Updated 25 ಜನವರಿ 2011, 12:15 IST

ಔರಾದ್: ಜನರು ಜಾಗೃತರಾದರೆ ಕಳಪೆ ಕಾಮಗಾರಿ ತಡೆಯಬಹುದಾಗಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.ತಾಲ್ಲೂಕಿನ ಗೌಂಡಗಾಂವ್ ಗ್ರಾಮದ ಕೂಡು ರಸ್ತೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಎರಡು ದಶಕಗಳಿಂದ ಈ ಗ್ರಾಮಸ್ಥರು ಉತ್ತಮ ರಸ್ತೆ ಕಂಡಿಲ್ಲ. ಜನರ ಬೇಡಿಕೆ ಮೇರೆಗೆ 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣದಲ್ಲಿ ಯಾವುದೇ ಲೋಪವಾಗದಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಾಮಗಾರಿಯಲ್ಲಿ ಯಾವುದೇ ರೀತಿಯ ದೋಷ ಇಲ್ಲವೇ ಕಳಪೆ ಕಂಡು ಬಂದಲ್ಲಿ ತಕ್ಷಣ ಅದನ್ನು ತಡೆ ಹಿಡಿದು ಸಂಬಂಧಿತರಿಗೆ ಸೂಚಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.

ನಿರಂತರ ಜ್ಯೋತಿ ಯೋಜನೆಯಡಿ ತಾಲ್ಲೂಕಿಗೆ 10 ಕೋಟಿ ರೂ. ಮಂಜೂರಾಗಿದೆ. ವಿದ್ಯುತ್ ಖಾತೆ ಸಚಿವರು ಶೀಘ್ರದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಧುರೀಣರಾದ ರಮೇಶ ಬಿರಾದಾರ, ಶರಣಪ್ಪ ಪಂಚಾಕ್ಷಿರೆ, ಚಂದ್ರಪಾಲ ಪಾಟೀಲ, ಬಂಡೆಪ್ಪ ಕಂಟೆ, ಕಾಶಿನಾಥ ಜಾಧವ್, ವಿನಾಯಕರಾಗ ಜಗದಾಳೆ, ಸಚಿನ ರಾಠೋಡ, ರಮೇಶ ವಾಘಮಾರೆ, ಅಮರ ಯಡವೆ ಮತ್ತಿತರು ಪಾಲ್ಗೊಂಡರು. ಪಡಿತರ ಚೀಟಿ, ವಿಧವಾ ವೇತನ, ನಿವೇಶನ ಮತ್ತಿತರೆ ಬೇಡಿಕೆ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.