ADVERTISEMENT

ಖಂಡ್ರೆಯವರ ಮಾರ್ಗದರ್ಶನ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 5:45 IST
Last Updated 2 ಮಾರ್ಚ್ 2012, 5:45 IST

ಭಾಲ್ಕಿ: ರಾಜಕೀಯ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಅಪಾರ ಸೇವೆ ಸಲ್ಲಿಸಿರುವ ಭೀಮಣ್ಣ ಖಂಡ್ರೆ ಅವರ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಅವಶ್ಯಕವಾಗಿದೆ. ಕಲ್ಬುರ್ಗಿ ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು ಖಂಡ್ರೆಯವರಿಗೆ ಸಂದ ಗೌರವವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಧರ್ಮಸಿಂಗ್ ಅಭಿಪ್ರಾಯಪಟ್ಟರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಗುರುವಾರ ನಡೆದ ಸರಳ ಅಭಿನಂದನಾ ಕಾರ್ಯಕ್ರಮದಲ್ಲಿ ಭೀಮಣ್ಣ ಖಂಡ್ರೆಯವರಿಗೆ ಸತ್ಕರಿಸಿ ಮಾತನಾಡಿದರು.

ತೊಂಭತ್ತರ ಇಳಿ ವಯಸ್ಸಿನಲ್ಲೂ ಯುವ ಉತ್ಸಾಹ ಹೊಂದಿರುವ ಭೀಮಣ್ಣ ಖಂಡ್ರೆಯವರಿಗೆ ದೇವರು ಆಯುರಾರೋಗ್ಯ ಭಾಗ್ಯ ಕರುಣಿಸಲಿ  ಎಂದು ಧರಂ ಹಾರೈಸಿದರು.

ಶಾಸಕ ಈಶ್ವರ ಖಂಡ್ರೆ, ಕಾಂಗ್ರೆಸ್ ಮುಖಂಡರುಗಳಾದ ಬಿ. ನಾರಾಯಣರಾವ, ಕೇಶವ ಮಹಾರಾಜ್, ಹಣಮಂತರಾವ ಚವ್ಹಾಣ, ಜಮೀಲ್ ಅಹಮ್ಮದ್, ಮಹಾದೇವ ಸ್ವಾಮಿ, ಶರಣಪ್ಪ ಬಿರಾದಾರ, ರಮೇಶ ಲೋಖಂಡೆ, ಕೈಲಾಸನಾಥ ಮಿನಕೆರೆ, ವಿಶ್ವನಾಥ ಮೋರೆ, ರಾಜಕುಮಾರ ವಂಕೆ, ಶಿವಕುಮಾರ ಕಲ್ಯಾಣೆ ಮುಂತಾದವರು ಇದ್ದರು. 

ವಾರ್ಷಿಕೋತ್ಸವ: ಮೌಢ್ಯತೆಗೆ ಒಳಗಾಗಿ ಹರಕೆಯ ಕುರಿಗಳಾಗಬೇಡಿ ಎಂದು ಮಕ್ಕಳ ರೋಗ ತಜ್ಞ ಡಾ. ಸಿ.ಆನಂದರಾವ ಅಭಿಪ್ರಾಯಪಟ್ಟರು.

ಪಟ್ಟಣದ ಶಿವಶಕ್ತಿ ಶಿಕ್ಷಣ ಸಂಸ್ಥೆಯ ಶ್ರೀಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 9ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಕೇಶವರಾವ ನಿಟ್ಟೂರಕರ್ ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ಮಾತ್ರ ಜ್ಞಾನ ಸಂಪನ್ನ ಮಕ್ಕಳು ತಯಾರಾಗಲು ಸಾಧ್ಯವೆಂದರು.

ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಅಶೋಕ ನಾಗೂರೆ  ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಭರತ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ನಾಗಶಟ್ಟಿ ಧರಂಪೂರ, ಚಂದ್ರಕಾಂತ ಬಿರಾದಾರ, ಮಿಥುನ್ ಪುರಿ, ಸಿದ್ಧಲಿಂಗ ರೆಡ್ಡಿ, ನಸಿರುದ್ದೀನ್  ಇದ್ದರು. ಅಡಳಿತಾಧಿಕಾರಿ ರವೀಂದ್ರ ಭಾತಂಬ್ರೆ ಸ್ವಾಗತಿಸಿದರು. ಮಕ್ಕಳ ಭಾಷಣ, ರೂಪಕ, ನೃತ್ಯ, ಕೋಲಾಟಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.