ADVERTISEMENT

ಗುಲ್ಬರ್ಗದ ಬಾಲಭವನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:22 IST
Last Updated 23 ಸೆಪ್ಟೆಂಬರ್ 2013, 6:22 IST

ಹುಮನಾಬಾದ್‌: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಪಕ್ಕದ ಹುಡಗಿ ಗ್ರಾಮದ ಬಸ್‌ ನಿಲ್ದಾಣದ ಮುಂದೆ ಪ್ರತಿವರ್ಷ ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ಕಿರು ಹಳ್ಳವಾಗಿ ಪರಿವರ್ತನೆಗೊಂಡು ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಗಾ್ರಮದ ಬಸ್‌ ನಿಲ್ದಾಣದ ಸಂಪೂರ್ಣ ಸ್ಥಳ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಡುವ ಕಾರಣ ಅಭಿವೃದಿ್ಧ ಕೈಗೊಂಡರು ಕೆಲವೇ ವರ್ಷದಲಿ್ಲ ಹೆದಾ್ದರಿ ನಿರ್ಮಾಣ ವೇಳೆ ನೆಲಸಮಗೊಳ್ಳಲಿದೆ ಆ ಕಾರಣಕಾ್ಕಗಿ ದುರುಸ್ತಿ ಕಾರ್ಯ ಕೈಗೆತಿ್ತಕೊಳು್ಳತಿ್ತಲ್ಲ ಎಂದು ಎನ್‌.ಇ.ಕೆ.ಆರ್‌.ಟಿ.ಸಿ. ಅಧಿಕಾರಿಗಳು ಹೇಳುತಾ್ತರೆ. ಈ ರಸೆ್ತ ಅಭಿವೃದಿ್ಧ ಕಾರ್ಯ ಆಗುವುದಕೆ್ಕ ಕನಿಷ್ಠ ಒಂದೆರಡು ವರ್ಷ ಬೇಕು. ಅಲಿ್ಲಯವರೆಗೆ ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕೆ ?ಎಂದು ಜನರು ಪ್ರಶ್ನಿಸುತ್ತಾರೆ.

ಸಾರ್ವಜನಿಕ ಕಸದ ತೊಟ್ಟಿಯಾಗಿ ಪರಿವರ್ತನೆಗೊಂಡ ಬಸ್‌ ನಿಲಾ್ದಣ ಹಿಂಭಾಗ, ಎಡ ಮತು್ತ ಬಲಬದಿಯನ್ನು ಸ್ವಚ್ಛಗೊಳಿಸಬೇಕು. ಸರ್ಕಾರದ ಹಣದಲಿ್ಲ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಕೊಳವೆ ಬಾವಿಯನು್ನ ತೋಡಿಸಿ, ಮಾಡಿದ್ದ ನಲಿ್ಲ ವ್ಯವಸೆ್ಥ ಬಳೆಕೆಗೆ ಬಾರದೇ ತುಕು್ಕಹಿಡಿದು ಹಾಳಾಗುತಿ್ತವೆ. ವಿವಿಧ ಗಾ್ರಮಗಳಿಂದ ಬರುವ ಮಹಿಳೆಯರು, ಮಕ್ಕಳಿಗೆ ಕುಡಿಯುವ ನೀರಿನ ಸೌಕರ್ಯ ಕಲಿ್ಪಸಬೇಕು. ನಿಲಾ್ದಣ ಅಧಿಕಾರಿ ಕಡಾ್ಡಯವಾಗಿ ಬಾರದೇ ವಾರಕೆ್ಕ ಒಂದೆರಡು ಬಾರಿ ಮಾತ್ರ ಕಾಣಿಸಿಕೊಳು್ಳತಾ್ತರೆ ಇದಕ್ಕೆ ಸುಧಾರಣೆ ತರಬೇಕು ಎನು್ನತಾ್ತರೆ ಗಾ್ರಮದ ಪ್ರಮುಖರಾದ ಸೋಮನಾಥ ಪಾಟೀಲ.

ಈ ಕುರಿತು ಹುಮನಾಬಾದ್‌ ಘಟಕ ವ್ಯವಸಾ್ಥಪಕ ಭದ್ರಪ್ಪ ಹುಡಗೆ ಅವರನು್ನ ಸಂಪರ್ಕಿಸಿದಾಗ  ಸುತ್ತಲು ಕಸ ಎಸೆಯುವ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ವಿಷಯಕೆ್ಕ ಸಂಬಂಧಪಟ್ಟಂತೆ ಮೇಲಾಧಿಕಾರಿಸಲಹೆ ಪಡೆದು ಸೌಕರ್ಯ ಕಲಿ್ಪಸಲು ಯತ್ನಿಸುವೆ. ನಿಲಾ್ದಣ ಚತುಷ್ಪಥ ರಾಷ್ಟ್ರಿಯ ಹೆದಾ್ದರಿ ವಾ್ಯಪಿ್ತಗೆ ಬರುವ ಕಾರಣ ಅಭಿವೃದಿ್ಧ ವಿಷಯ ಮೇಲಾಧಿಕಾರಿಗಳಿಗೆ ಬಿಟ್ಟದು್ದ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.