ADVERTISEMENT

ಜೀವನದಲ್ಲಿ ಗುರಿ ಇಟ್ಟುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 8:20 IST
Last Updated 15 ಮಾರ್ಚ್ 2011, 8:20 IST

ಬಸವಕಲ್ಯಾಣ: ಜೀವನದಲ್ಲಿ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಸಲಹೆ ಕೊಟ್ಟರು.ಇಲ್ಲಿನ ಜೀಜಾಮಾತಾ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಮತ್ತು ಗಣ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿನ ಶೈಕ್ಷಣಿಕ ವಾತಾವರಣ ಸುಧಾರಿಸುತ್ತಿದೆ. ಉನ್ನತ ಪದವಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ನೇತೃತ್ವ ವಹಿಸಿದ್ದ ಮಾಣಿಕನಗರ ಸಂಸ್ಥಾನದ ಜ್ಞಾನರಾಜಪ್ರಭು ಮಹಾರಾಜರು ಮಾತನಾಡಿ ಸಭ್ಯ ಸಮಾಜದ ನಿರ್ಮಾಣಕ್ಕೆ ಯತ್ನಿಸಬೇಕು. ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಡಾ.ಎಸ್.ಬಿ.ಮಹಾಜನ ಮಾತನಾಡಿ ಎಸ್ಸೆಸ್ಸೆಲ್ಸಿಗೆ ಹೆಚ್ಚಿನ ಮಹತ್ವ ಇರುವುದರಿಂದ ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಮುಂದೆಯೂ ಅಧ್ಯಯನಶೀಲರಾಗಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು. ಡಾ.ಮಾರುತಿ ಪೂಜಾರಿ ಮಾತನಾಡಿದರು.

ವಾಮನರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ.ಗೌತಮ ಕಾಂಬಳೆ, ಡಾ.ಸುಹಾಸ ಕಾಂಬಳೆ, ಡಾ.ನರೇಂದ್ರ ಸಿಂಧೆ, ದಿಲೀಪ ಸಿಂಧೆ, ನರಸಿಂಗರೆಡ್ಡಿ ಗದ್ಲೇಗಾಂವ, ಮಾಧವರಾವ ಹಸೂರೆ, ಬಸವರಾಜ ತಪಲಿ, ಅರುಣ ದೇಶಪಾಂಡೆ, ತಾತೇರಾವ ಪಾಟೀಲ ಉಪಸ್ಥಿತರಿದ್ದರು. ಬಾಲಾಜಿ ಬಿರಾದಾರ ಸ್ವಾಗತಿಸಿದರು. ಸುವರ್ಣಾ ಕಾಮಗಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.