ADVERTISEMENT

ನಾಳೆಯಿಂದ ಮೇವು ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 10:00 IST
Last Updated 14 ಏಪ್ರಿಲ್ 2012, 10:00 IST
ನಾಳೆಯಿಂದ ಮೇವು ಕೇಂದ್ರ ಆರಂಭ
ನಾಳೆಯಿಂದ ಮೇವು ಕೇಂದ್ರ ಆರಂಭ   

ಔರಾದ್: ಸಹಾಯಕ ಆಯುಕ್ತ ಪ್ರಕಾಶ ಮತ್ತು ತಹಸೀಲ್ದಾರ್ ಶಿವಕುಮಾರ ಶೀಲವಂತ ನೇತೃತ್ವದಲ್ಲಿ ಎರಡು ತಂಡಗಳು ಗುರುವಾರದಿಂದ ತಾಲ್ಲೂಕಿನ ಬರಪೀಡಿತ ಗ್ರಾಮಗಳಲ್ಲಿ ಮಿಂಚಿನ ಸಂಚಾರ ಕೈಗೊಂಡಿದ್ದಾರೆ.

ಸಹಾಯಕ ಆಯುಕ್ತ ಪ್ರಕಾಶ ಅವರು ಶಂಕರ ತಾಂಡಾ, ಪುನಾ ತಾಂಡಾ, ರಾಯಪಳ್ಳಿ, ಇಟಗ್ಯಾಳ, ನಾಗೂರ (ಬಿ), ಗಡಿಕುಶನೂರ, ಜಕನಾಳ, ಲಿಂಗದಳ್ಳಿ ಜೀರ್ಗಾ (ಕೆ), ಜೀರ್ಗಾ (ಬಿ). ಲಾಲು ತಾಂಡಾ. ಬಜಿರಾಮ ತಾಂಡಾ ಸೇರಿ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಕಲೆ ಹಾಕಿದರು.

ಮತ್ತು ಸಮಸ್ಯೆ ಪರಿಹಾರದ ಸಂಬಂಧ ಅಲ್ಲಿಯ ಜನರೊಂದಿಗೂ ಸಮಾಲೋಚನೆ ನಡೆಸಿದರು. ಸಮಸ್ಯೆ ಪರಿಹರಿಸಲು ನಾವು ಸದಾ ಸಿದ್ಧರಿದ್ದು, ಯಾವುದೇ ರೀತಿಯ ಆತಂಕ ಪಡಬಾರದು ಎಂದು ಜನರಲ್ಲಿ ಧೈರ್ಯ ತುಂಬಿದರು.

ತಹಸೀಲ್ದಾರ್ ಶಿವಕುಮಾರ ಶೀಲವಂತ ಅವರ ನೇತೃತ್ವದ ತಂಡ ಗುರುವಾರ ಮತ್ತು ಶುಕ್ರವಾರ ದಾಬಕಾ, ಕುಶನೂರ ಮತ್ತು ಕಮಲನಗರ ಹೋಬಳಿಯ ಗ್ರಾಮ ಮತ್ತು ತಾಂಡಾಗಳಿಗೆ ಬೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಕೆಲ ತಾಂಡಾಗಳು ಬಿಟ್ಟರೆ ಬಹುತೇಕ ಎಲ್ಲ ಗ್ರಾಮಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿಗಾಗಿ ಅಂಥ ಗಂಭೀರ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇವು ಕೇಂದ್ರ: ಇದೇ 15ರಿಂದ ತಾಲ್ಲೂಕಿನ ಎಲ್ಲ ಆರು ಹೋಬಳಿ ಕೇಂದ್ರಗಳಲ್ಲಿ ಮೇವು ಕೇಂದ್ರ ತೆರೆಯಲಾಗುತ್ತಿದೆ. ರಿಯಾಯ್ತಿ ದರದಲ್ಲಿ ಮೇವು ವಿತರಿಸಲಾಗುತ್ತಿದ್ದು, ಮೇವಿನ ವಿಷಯದಲ್ಲಿ ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ತಹಸೀಲ್ದಾರ್ ಶೀಲವಂತ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.