ADVERTISEMENT

ಪ್ಲ್ಯಾನ್ ಪ್ಲಸ್ ತಂತ್ರಾಂಶ ಅನುಷ್ಠಾನ: ತರಬೇತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 8:50 IST
Last Updated 12 ಜನವರಿ 2012, 8:50 IST

ಬೀದರ್: ಪ್ಲ್ಯಾನ್ ಪ್ಲಸ್ ತಂತ್ರಾಂಶ ಅನುಷ್ಠಾನ ಕುರಿತ ತರಬೇತಿ ಶಿಬಿರವು ನಗರದ ಹೊರವಲಯದ ನೌಬಾದ್‌ನಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಆರಂಭಗೊಂಡಿತು.

ಪ್ಲ್ಯಾನ್ ಪ್ಲಸ್ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಶಾಂತವೀರ ಪಾಟೀಲ್ ಉದ್ಘಾಟಿಸಿದರು. ಪ್ಲ್ಯಾನ್ ಪ್ಲಸ್ ತಂತ್ರಾಂಶದ ಮಹತ್ವ ಮತ್ತು ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

ರಾಜ್ಯಮಟ್ಟದ ಎನ್.ಐ.ಸಿ. ಅಧಿಕಾರಿ ರೀಬೆ, ಜಿಲ್ಲಾ ಯೋಜನಾಧಿಕಾರಿ ಸಿದ್ಧಮ್ಮ ಪಾಟೀಲ್, ಗುತ್ತಿಗೆದಾರ ಶಶಿಕುಮಾರ, ಪ್ರಮುಖರಾದ ಶ್ರೀನಿವಾಸ, ವಿನಯ್ ಉಪಸ್ಥಿತರಿದ್ದರು. ಶಾಂತಕುಮಾರ ಪಾಟೀಲ್ ಸ್ವಾಗತಿಸಿದರು. ಬಿ.ಎನ್. ಸ್ವಾಮಿ ವಂದಿಸಿದರು.  ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.