ADVERTISEMENT

ಬಸವ ವಸತಿ ಯೋಜನೆ: 2,000 ಮನೆ ಕಾಮಗಾರಿ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 7:35 IST
Last Updated 9 ನವೆಂಬರ್ 2012, 7:35 IST

ಔರಾದ್: ಗುಡಿಸಲು ಮುಕ್ತ ಯೋಜನೆಯಡಿ ರಾಜೀವ್‌ಗಾಂಧಿ ವಸತಿ ನಿಗಮ ಅನುಮೋದನೆ ನೀಡಿದ 8622 ಮನೆ ಪೈಕಿ 2285 ಮನೆ ಕಾಮಗಾರಿ ಅಪೂರ್ಣವಾಗಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆ ವಸತಿ ಸಚಿವ ವಿ. ಸೋಮಣ್ಣ ಅವರು ಇಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ವೇಳೆ 1830 ಮನೆಗಳು ರದ್ದಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರದ್ದಾದ ಮನೆಗಳ ಜೊತೆಗೆ ಇತರೆ 445 ಮನೆಗಳ ಕಾಮಗಾರಿ ಇನ್ನು ಆರಂಭವಾಗುವ ಮುನ್ನವೇ ಜಾಗೃತ ಸಮಿತಿ ಮತ್ತೆ ಹೊಸದಾಗಿ 3639 ಗ್ರಾಮಗಳು ಆಯ್ಕೆ ಮಾಡಿದೆ. 

ಶಾಸಕ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿಯ ತಾಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚೀಟ ಎತ್ತುವ ಮೂಲಕ 51 ಗ್ರಾಮಗಳಿಗೆ 3639 ಮನೆಗಳು ಹಂಚಿಕೆ ಮಾಡಿದ್ದಾರೆ. ಹಿಂದಿನಂತೆ ಮಂಜೂರಿಯಾದ ಮನೆಗಳು ರದ್ದಾಗದಂತೆ ನೋಡಿಕೊಂಡು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಪಿಡಿಒ ಮತ್ತು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ. ಅಧ್ಯಕ್ಷೆ ದೀಪಿಕಾ ಸಚಿನ್ ರಾಠೋಡ, ತಾಪಂ. ಅಧ್ಯಕ್ಷ ರಾಜಕುಮಾರ ಪಾಟೀಲ. ಉಪಾಧ್ಯಕ್ಷೆ ಸಂಗಮ್ಮ, ಜಿಪಂ. ಸದಸ್ಯ ಧೂಳಪ್ಪ ಸೂರಂಗೆ, ಕಾಶಿನಾಥ ಜಾಧವ್, ಚೆನ್ನಬಸಪ್ಪ, ಮುಖ್ಯಾಧಿಕಾರಿ ಗದಗೆಪ್ಪ, ತಾಲ್ಲೂಕು ನೋಡಲ್ ಅಧಿಕಾರಿ ಗುರುರಾಜ ಈ ವೇಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.