ADVERTISEMENT

ಬಾಬಾ ಬಂಧನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 10:05 IST
Last Updated 7 ಜೂನ್ 2011, 10:05 IST

ಹುಮನಾಬಾದ್: ಬಾಬಾ ರಾಮ್‌ದೇವ್ ಜತೆಗಿನ ಅನುಚಿತ ವರ್ತನೆಯನ್ನು ಖಂಡಿಸಿ ಭಾರತ ಸ್ವಾಭಿಮಾನ ಟ್ರಸ್ಟ್ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ, ಮೌನ ಪ್ರತಿಭಟನೆಯ ಮೂಲಕ ಕರಾಳ ದಿನ ಆಚರಿಸಿದರು.

ರ‌್ಯಾಲಿಯ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿದ ಪದಾಧಿಕಾರಿಗಳು ಬಾಬಾ ರಾಮದೇವ ಜತೆಗೆ ನಡೆದುಕೊಂಡ ಅನುಚಿತ ವರ್ತನೆ ಕುರಿತು ನ್ಯಾಯಾಂಗ ತನಿಖೆ ಕೈಗೊಂಡು ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ  ಈ ದೇಶದಲ್ಲಿ ಎಸಗಿರುವ ಕೃತ್ಯ ತುರ್ತು ಪರಿಸ್ಥಿತಿಯಲ್ಲಿ  ನಡೆಸಿದ ದೌರ್ಜನ್ಯವನ್ನು ನೆನಪಿಸುತ್ತದೆ ಎಂದು ಭಾರತ ಸ್ವಾಭಿಮಾನ ಟ್ರಸ್ಟ್‌ನ ಸುಭಾಷ ಅಷ್ಟಿಕರ, ಶಿವಶಂಕರ ತರನಳ್ಳಿ,  ಎಂ.ಆರ್.ಗಾದಾ ರೇಚೆಟ್ಟಿ ಶರಣಪ್ಪ, ಝೇರೆಪ್ಪ ಮಣಿಗಿರೆ ಕಿಡಿ ಕಾರಿದರು.

ನಾರಾಯಣರಾವ್ ಜಾಜಿ, ಭೀಮರಾವ ಧುಮಾಳೆ, ಬಸವಣಪ್ಪ ಹಾರಕೂಡ, ಮಾಣಿಕಪ್ಪ ಜಾಜಿ, ಬಿಜೆಪಿ
ತಾಲ್ಲೂಕು ಅಧ್ಯಕ್ಷ ಶಿವಾನಂದ ಮಂಠಾಳಕರ್, ವಿಜಯಕುಮಾರ ದುರ್ಗದ್, ಅಶೋಕ ಸಿದ್ದೇಶ್ವರ, ರವಿ ಮಾಡಗಿ, ಗಿರೀಶ ಪಾಟೀಲ, ಭುಜಂಗ್ ಆರ್ಯ, ಘವಾಳ್ಕರ್ ಹಾಗೂ  ಪಟ್ಟಣದ ನೂರಾರು ವ್ಯಾಪಾರಸ್ಥರು ರ‌್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು. ರ‌್ಯಾಲಿ ನಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಮಾಣಿಕಪ್ಪ ಗಾದಾ ನೇತೃತ್ವದಲ್ಲಿ ಪ್ರಭಾರಿ ತಹಸೀಲ್ದಾರ ತಿಪ್ಪಣ್ಣ ಸಾಲಿವಾಲೆ  ಅವರಿಗೆ ಸಲ್ಲಿಸಲಾಯಿತು.

ಪಟ್ಟಣದ ಆರ್ಯ ಸಮಾಜದಿಂದ ಬಸವೇಶ್ವರ, ಬಾಲಾಜಿ, ಸರ್ದಾರ ಪಟೇಲ, ಅಂಬೇಡ್ಕರ್ ವೃತ್ತ ಮೂಲಕ ತಹಸೀಲ್ದಾರ ಕಚೇರಿವರೆಗೆ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನಾ ರ‌್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.