ADVERTISEMENT

ಬೀದರ್: ಮಾವು, ಕಲ್ಲಂಗಡಿ ಬೆಳೆ ಸಂರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 7:17 IST
Last Updated 23 ಮಾರ್ಚ್ 2017, 7:17 IST

ಬೀದರ್‌: ಜಿಲ್ಲೆಯಲ್ಲಿ ಮಾವು ಹಾಗೂ  ಕಲ್ಲಂಗಡಿ  ಹೂವು, ಮಿಡಿ, ಕಾಯಿ ಬಿಡುವ ಹಂತದಲ್ಲಿವೆ. ಜಿಲ್ಲೆಯಲ್ಲಿ ಅವಕಾಳಿ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ರೈತರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಎಂ.ಬರಗಿಮಠ ಸಲಹೆ ನೀಡಿದ್ದಾರೆ.

ಜಿಲ್ಲೆಯ ಕೆಲವೆಡೆ ಮಾವಿನ ಕಾಯಿಗಳು, ಅಡಿಕೆಗಾತ್ರ, ಲಿಂಬೆಗಾತ್ರ ಹಾಗೂ ಇನ್ನೂ ಕೆಲವೆಡೆ ಪೇರಲ ಗಾತ್ರಕ್ಕೆ ಬೆಳೆದಿವೆ. ಮಿಡಿಕಾಯಿಗಳು ಉದು ರುತ್ತಿರುವುದು ಕಂಡು ಬಂದಿದೆ. ಇದಕ್ಕೆ  ಪೋಷಕಾಂಶಗಳ ಕೊರತೆ, ಕೀಟ ರೋಗಗಳ ಬಾಧೆ, ಮಳೆಗಾಳಿ ಮತ್ತು ನೀರಿನ ಕೊರತೆಯೇ ಕಾರಣವಾಗಿದೆ.

ಆದ್ದರಿಂದ ಮಾವಿನ ಮರಕ್ಕೆ  ತುರ್ತಾಗಿ  50ಗ್ರಾಂ ಮ್ಯಾಂಗೋ ಸ್ಪೆಶಲ್ ಪುಡಿ, ಒಂದು ನಿಂಬೆ ಹಣ್ಣಿನ ರಸ ಮತ್ತು ಒಂದು ಸಣ್ಣ  ಪಾಕೇಟ್‌ ಶಾಂಪೂ ಹತ್ತು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪ ಡಿಸಬೇಕು.

10  ದಿನಗಳ ನಂತರ ಬರ ಬಹುದಾದ ಮಾವಿನ ಓಟೆ ಕೊರೆಯುವ ಕೀಟದ ನಿಯಂತ್ರಣಕ್ಕಾಗಿ ಅಸಿಫೇಟ್-75 ಎಸ್‌ಪಿ  15ಗ್ರಾಂ ಪುಡಿ ಅಥವಾ ಡೆಕಾಮೆಥ್ರೆನ್  10 ಮಿ.ಲೀ. ಔಷಧಿ ಯನ್ನು ಪ್ರತಿ 10 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇದೇ ಔಷಧಿಯನ್ನು ಮೂರು ವಾರದ ನಂತರವೂ ಪುನಃ ಸಿಂಪಡಿಸಬೇಕು.

ರೋಗಕ್ಕೆ ತುತ್ತಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ವಾರಕ್ಕೊಮ್ಮೆ ಆಯ್ದು ತೋಟದ ಒಂದು ಅಂಚಿನಲ್ಲಿ ಗುಂಡಿ ತೆಗೆದು ಕಾಯಿಗಳನ್ನು ಹಾಕಿ ಮಣ್ಣು ಮುಚ್ಚಬೇಕು. ಈಗ ಕಾಯಿಗಳು ಬೆಳವಣಿಗೆ ಹಂತದಲ್ಲಿರುವುದರಿಂದ ಹೆಚ್ಚಿನ ಇಳುವರಿಗಾಗಿ ನೀರಿನ ಅವಶ್ಯಕತೆ ಇರುತ್ತದೆ. ಕಾಲುವೆ ನೀರಾವರಿ ಪದ್ಧತಿ ಇದ್ದಲ್ಲಿ ಗಿಡಗಳ ಬುಡದಿಂದ ಮೂರು ಅಡಿ ದೂರದಲ್ಲಿ ಸುತ್ತಲೂ ನಾಲಿ ಮಾಡಿ ಹತ್ತು ದಿನಕೊಮ್ಮೆ ನೀರು ಕೊಡಬೇಕು.

ಹನಿ ನೀರಾವರಿ ಪದ್ಧತಿಯಲ್ಲಿಯೂ ಸಹ ತಿಂಗಳಿಗೊಮ್ಮೆ ಹರಿ (ನಾಲಿ) ನೀರು ಕೊಟ್ಟು ಡ್ರಿಪ್‌ನಿಂದ ವಾರಕ್ಕೆರಡು ಬಾರಿ ನೀರು ಕೊಡಬೇಕು. ದೊಡ್ಡ ದೊಡ್ಡ ಗಿಡಗಳಿಗೆ ನೀರು ದೊರೆಯಬೇಕೆಂದರೆ ಬುಡಗಳಿಂದ 1.5 ಅಡಿಗೊಂದರಂತೆ ಎಡಕ್ಕೆರಡು ಬಲಕ್ಕೆರಡು ಡ್ರಿಪ್‌ರ್‌ಗಳನ್ನು ಕೂಡಿಸಬೇಕು. ಕಾಂಡದಲ್ಲಿ ಅಂಟು ಸೋರುವ ರೋಗ ಮತ್ತು ಕೀಟಗಳ ಬಾಧೆ ಮತ್ತು  ಬಿಸಿಲಿನ ಶಾಖ ತಡೆಯಲು ಬೋರ್ಡೋಪೇಸ್ಟ  ಅಥವಾ ಬೋರ್ಡೋ ಗಾರ್ಡದಿಂದ ಪೇಸ್ಟ್ ತಯಾರಿಸಿ ನೆಲದಿಂದ ಮೇಲಕ್ಕೆ  3 ಅಡಿ ವರೆಗೆ ಬುಡಗಳಿಗೆ ಸುತ್ತಲೂ ಲೇಪಿಸಬೇಕು.

ಕಲ್ಲಂಗಡಿ: ಬೀಜ ನಾಟಿ ಮಾಡಿ ಒಂದು ತಿಂಗಳಾದ ಪ್ರತಿ ಬಳ್ಳಿಗಳ ಕುಡಿ ಕಡಿದು ಮೇಲು ಗೊಬ್ಬರವಾಗಿ 50 ಗ್ರಾಂ ಯುರಿಯಾ ಬಳ್ಳಿಯಿಂದ  6 ಇಂಚು ದೂರದಲ್ಲಿಕೊಟ್ಟು ಮಣ್ಣು ಮುಚ್ಚಿ ನೀರು ಕೊಡಬೇಕು. ಮಿಡಿಗಳು ಲಿಂಬೆ/ ಜಾಪಳ್ ಕಾಯಿಗಳ ಗಾತ್ರದಷ್ಟು ಬೆಳೆದ ಸಂದರ್ಭದಲ್ಲಿ  20 ಗ್ರಾಂ ಮೆಲಾ ಥಿಯಾನ್‌ದೊಂದಿಗೆ 100ಗ್ರಾಂ ಸಕ್ಕರೆ ಅಥವಾ 100 ಗ್ರಾಂ ಬೆಲ್ಲವನ್ನು ಪ್ರತಿ 10 ಲೀಟರ್ ನೀರಿನಲ್ಲಿ ಕರಗಿಸಿ 10–12 ದಿನಕೊಮ್ಮೆ ಸಿಂಪಡಿಸಬೇಕು.

ಎಲೆ ಸುರಂಗ ಕೀಟದ ಬಾಧೆ ಅಂದರೆ ಎಲೆಗಳ ಮೇಲೆ ಹಾವಿನಾಕಾರದ ಬಿಳಿ ಮಚ್ಚೆಗಳನ್ನು ಕಂಡರೆ 10ಗ್ರಾಂ ಅಸಿಫೇಟ್-75 ಎಸ್‌ಪಿ ಪುಡಿಯನ್ನು ಪ್ರತಿ 10ಲೀಟರ್ ನೀರಿಗೆ ಬೆರೆಸಿ 25 ದಿನ ಕ್ಕೊಮ್ಮೆ  2 ಬಾರಿ ಸಿಂಪಡಿಸಬೇಕು.

ಹಣ್ಣುಗ ಳನ್ನು ದೊಡ್ಡ ಗಾತ್ರಕ್ಕೆ ಬಂದು ಕಾಯಿಗಳ ತುಂಬಿನ ಹತ್ತಿರದ ಮೀಸೆ ಒಣಗಿದಾಗ ಹಾಗೂ ಹಣ್ಣುಗ ಳ ತಳಮೈ ಹಳದಿ ಅಥವಾ ಬಿಳಿಬಣ್ಣಕ್ಕೆ ತಿರುಗಿದ ನಂತರ ಮತ್ತು ಹಣ್ಣುಗಳನ್ನು ಬೆರ ಳಿನಿಂದ ಬಾರಿಸಿದಾಗ ಡಬ್‌ಡಬ್ ಎಂದು ಮಂದ ಸಪ್ಪಳ ಬಂದಾ ಗ ಕಟಾವು ಮಾಡಬೇಕು. ಬಳ್ಳಿಗೆ 3–4 ಕಾಯಿಗಳನ್ನಷ್ಟೇ ಬಿಟ್ಟು ಉಳಿದ ಕಾಯಿಗ ಳನ್ನು ತೆಗೆಯುವುದರಿಂದ ದೊಡ್ಡ ಗಾತ್ರದ ಹಣ್ಣುಗಳನ್ನು ಪಡೆ ಯಬಹುದು.

ರೈತರು ಹೆಚ್ಚಿನ ಮಾಹಿತಿಗೆ ತಾಲ್ಲೂ ಕು ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳ ತೋಟಗಾರಿಕಾ ಅಧಿಕಾರಿ ಅಥವಾ ಜಿಲ್ಲಾ ಹಾರ್ಟಿಕ್ಲಿನಿಕ್ ವಿಷಯ ತಜ್ಞರನ್ನು (ಮೊಬೈಲ್ ಸಂಖ್ಯೆ: 94820 53985) ಸಂಪರ್ಕಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶ ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT